ನಾನು ಒಂಭತ್ತನೆ ತರಗತಿಯಲ್ಲಿ ಓದುತ್ತಿದ್ದಾಗ ನಡೆದಂತಹ ಓಂದು ಘಟನೆ.ಬೇರೆಯವರಿಗೆ ಇದು ಓಂದು ಹಾಸ್ಯಮಯ ಘಟನೆಯಾಗಿ ಕಾಣಬಹುದು ಆದರೆ ನನಗೆ ಇದು ಎಂದು ಮರೆಯಲಾಗದಂತಹ ಘಟನೆ ಯಾಕೆಂದರೆ ಆನುಭವಿಸಿದವನು ನಾನೆ ಆಲ್ವ ಅದಕ್ಕೆ.

ಸಾಮಾನ್ಯವಾಗಿ ಶಾಲೆಗಳಲ್ಲಿ ಓದುವಾಗ ಮಕ್ಕಳು ಶಾಲೆ ಘಂಟೆ ಬಾರಿಸುವುದಕ್ಕಿಂತ ಅರ್ದ ಘಂಟೆ ಓಂದು ಘಂಟೆ ಮುಂಚಿತವಾಗಿ ಶಾಲೆಗೆ ಬಂದು ಓದಿಕೊಳ್ಳುತ್ತಿದ್ದರು ಅಂತಿರಾ ಇಲ್ಲ ಶಾಲಾ ಮೈದಾನದಲ್ಲಿ ಲಗೋರಿ, ಕ್ರೀಕೆಟು,HandBall ಹೀಗೆ ಹಲವು ಆಟಗಳನ್ನ ಆಡುವುದುಂಟು.ಆದರೆ ನಾನು ಓದುತ್ತಿದ್ದ ಶಾಲೆಯಲ್ಲಿ ಈ ತರಹ ಶಾಲಾ ಘಂಟೆ ಬಾರಿಸುವುದಕ್ಕಿಂತ ಮೊದಲೆ ಬಂದು ಶಾಲಾ ಮೈದಾನದಲ್ಲಿ ಆಟ ಆಡುವುದನ್ನ ನಿಷೆದಗೋಳಿಸಲಾಗಿತ್ತು. ಯಾಕೆಂದರೆ ಆ ಸಮಯದಲ್ಲಿ ಯಾರು ಹೇಳೊರು ಕೇಳೊರು ಇಲ್ಲದೆ ಇರುವುದರಿಂದ ಕೆಲವು ಅವಘಡಗಳು ಸಂಭವಿಸಿದ್ದವು ಅದಕ್ಕೆ.ಆದರು ಕೆಲವು ಹುಡುಗರು ಆಡೋದನ್ನ ನಿಲ್ಲಿಸುತ್ತ ಇರಲಿಲ್ಲ ಆಗೆ ಆಟ ಆಡುವಾಗೇನಾದರು ನಮ್ಮ ಪಿ.ಟಿ ಮಾಸ್ಟರ್ ಕೈಯಲ್ಲಿ ಸಿಕ್ಕಿಹಾಕಿಕೋಂಡು ಬಿಟ್ಟರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ .

ಈಗೆ ಒಂದು ದಿವಸ ನಮ್ಮ ಗುಂಪಿನವರೆಲ್ಲಾ ಸೇರಿ ಆಡ್ತಾ ಇದ್ವಿ ಹೆಚ್ಚು ಕಡಿಮೆ ಒಂದು ಹತ್ತು ಹುಡುಗರು ಇದ್ವಿ.ಆ ದಿವಸ ನಮ್ಮ ಶಾಲಾ ಪಿ.ಟಿ ಮಾಸ್ಟರ್ ಏಕಾಏಕಿ ನಮ್ಮ ಶಾಲಾ ಮೈದಾನದಲ್ಲಿ ಪ್ರತ್ಯಕ್ಷನಾಗೆ ಬಿಟ್ಟ. ದರಿದ್ರದ್ದು ಆ ಸಮಯಕ್ಕೆ ಸರಿಯಾಗಿ ನನ್ನ ಸ್ನೇಹಿತ ಹೊಡೆದಂತಹ ಚೆಂಡು ಅವನ ಪಾದದ ಬಳಿ ಹೋಗಿ ಬಿತ್ತು.ಆಗ ನಮ್ಮ ಪಿ.ಟಿ ಮಾಸ್ತರ್ ಚೆಂಡನ್ನು ಕೈಗೆತ್ತಿಕೊಂಡು ಏರು ದ್ವನಿಯಲ್ಲಿ ಯಾವನಲೆ ಅವ ಆಟ ಆಡಬೇಡ್ರಲೇ ಅಂದ್ರು ಆಟ ಆಡ್ತಿರವ ಬನ್ನ್ರೊ ಇಲ್ಲಿ ಅಂತ ಕರೆದರು.ಎಲ್ಲಾರಿಗು ಒಂದು ಒಂದು ಚಡಿ ಏಟು ಕೊಟ್ಟು ಹೆಡ್ ಮಾಸ್ತರ್ ಅತ್ತಿರ ನಡಿರಲೆ ಅಂತ ಕರೆದುಕೊಂಡು ಹೋದರು.ಆ ಸಮಯಕ್ಕೆ  ಶಾಲೆ ಘಂಟೆ ಸಹ ಬಾರಿಸಿತು.ಆಗ ನಮ್ಮ ಹೆಡ್ ಮಾಸ್ತರ್ ಪ್ರಾರ್ಥನೆ ಮುಗಿಸಿ ಬಂದು ವಿಚಾರ ಮಾಡ್ತಿನಿ ಅಂದ್ರು. ನಾನು ಮತ್ತು ನನ್ನ ಸ್ನೇಹಿತರೆಲ್ಲಾ ಒಬ್ಬರಿಂದೆ ಒಬ್ಬರು ಸಾಲಾಗಿ ನಿಂತುಕೊಂಡಿದ್ವಿ.ಆ ಸಾಲಿನಲ್ಲಿ ಮೊದಲಿಗೆ ನಿಂತಿದ್ದ ನಾನು ಮತ್ತು ನನ್ನ ಹಿಂದೆ ನಿಂತಿದ್ದ ನನ್ನ ಸ್ನೇಹಿತನಿಗೆ ಇಬ್ಬರಿಗೊ ಒಂದು ಮನೆ ಹಾಳು ಯೋಚನೆ ಬಂತು. ಲೇ ನಾವು ನೋಡಿದರೆ ಸಾಲಿನಲ್ಲಿ ಮೊದಲೆ ನಿಂತಿವಿ  ಹೆಡ್ ಮಾಸ್ಟರ್ ಪ್ರಾರ್ಥನೆ ಮುಗಿಸಿದ ಮೇಲೆ ಈ ಕಡೆಯಿಂದನೆ ಬರೋದು ನಾವು ನೋಡಿದರೆ ಮುಂದೆ ನಿಂತಿವಿ ಮೊದಲು ಕೈಗೆ ಸಿಗದೆ ನಾವು ಹಿಟ್ಟಾಡಿಸಿಕೊಂಡು ಹೊಡೆದುಬಿಡ್ತಾರೆ ಬಾ ಸೀದಾ ಇವರೆಲ್ಲಾರಿಗಿಂತ ಹಿಂದೆ ಹೋಗಿ ನಿಂತುಬಿಡೊಣ.ಯಾಕೆಂದರೆ ಇವರೆಲ್ಲಾರಿಗು ವಿಚಾರಿಸಿಕೊಂಡು ಬರುವತ್ತಿಗೆ ಸುಸ್ತು ಆಗಿ ಬಿಟ್ಟಿರುತ್ತಾರೆ ಆವಾಗ ನಮಗೆ ಕಡಿಮೆ ಹೊಡೆತ ಬಿಳುತ್ತೆ ಬಾ ಹಿಂದೆ ಹೋಗಣ ಅಂತ ನಾನು ಮತ್ತು ನನ್ನ ಸ್ನೇಹಿತ ಹೋಗಿ ಕೊನೆಯಲ್ಲಿ ನಿಂತುಕೊಂಡೆವು.

ಪ್ರಾರ್ಥನೆ ಮುಗಿತು ಹೆಡ್ ಮಾಸ್ಟರ್ ಮತ್ತೆ ನಮ್ಮ ಪಿ.ಟಿ. ಮಾಸ್ಟರ್ ಬಂದ್ರು. ನಮ್ಮ ಗ್ರಹಚಾರ ಅವತ್ತು ಅವರ ಜೊತೆ ನಮ್ಮ ಕ್ಲಾಸ್ ಟೀಚರ್ ಸಹ ಬಂದ್ರು. ಬಂದವರೆ ಮುಂದೆ ನಿಂತಿದ್ದ ಹುಡುಗನ ತಲೆ ಕೊದಲು ಹಿಡಿದುಕೊಂಡು ಗೊಡೆಗೆ ಓಂದು ಡಿಚ್ಚಿ ಹೊಡೆಸಿಬಿಟ್ಟರು ಪಾಪ ಅಲ್ವ ಆ ಪಾಪ ನಾನೆ ಯಾಕೆಂದರೆ ನಾವು ಯಾವುದು ಮೊದಲು ಅಂತ ತಿಳಿದುಕೊಂಡಿದ್ದೆವೊ ಅದು ಆ ದಿನ ಕೊನೆ ಆಗಿತ್ತು.ನಾನಂತು ದೊಡ್ಡ ಬಲಿ ಕಾ ಬಕ್ರಾ ಆಗಿಬಿಟ್ಟಿದ್ದೆ. ನಮ್ಮ ಹೆಡ್ ಮಾಸ್ಟರ್ ಕೊಟ್ಟ ಮೊದಲ ಹೊಡೆತಕ್ಕೆ ಇನ್ನೆನು ನನ್ನ ಪ್ಯಾಂಟ್ ಒದ್ದೆ ಆಗಿಬಿಡ್ತಿತ್ತು Full ಕಂಟ್ರೊಲ್ ಮಾಡ್ಕೊಂಡೆ.

ಹೆಡ್ ಮಾಸ್ಟರ್: ಏನು ನಿನ್ನ ಹೆಸರು?
ನಾನು: ಬಸವರಾಜ್
ಹೆಡ್ ಮಾಸ್ಟರ್: ರಾಜ್........Last testನಲ್ಲಿ ಎಷ್ಟು Marks ಬಂದಿದೆ?
ನಾನು: ಸುಮ್ಮನೆ ತಲೆಬಗ್ಗಿಸಿ ನಿಂತುಕೊಂಡೆ. ಯಾಕೆಂದರೆ ನಮ್ಮ ಕ್ಲಾಸ್ ಟೀಚರ್ ಇದ್ದರಲ್ಲಾ ಅದಕ್ಕೆ ಇಲ್ಲಾ ಅಂದಿದ್ದರೆ ಏನಾದರು ಸುಳ್ಳು ಹೇಳಿಬಿಡುತ್ತಿದ್ದೆ.
ಕ್ಲಾಸ್ ಟೀಚರ್ : ಎರಡು Subject ನಲ್ಲಿ Fail ಆಗಿದ್ದಾನೆ ಸರ್.

ತಗಳಪ್ಪ ಹುರಿಯುವ ಬೆಂಕಿ ಮೇಲೆ ತುಪ್ಪ ಸುರಿದ ಆಗೆ ಹಾಯ್ತು ಹೆಡ್ ಮಾಸ್ಟರ್ ಗೆ ಕೋಪ ಇನ್ನು ಜಾಸ್ತಿ ಆಯ್ತು.

ಹೆಡ್ ಮಾಸ್ಟರ್ : ಶಾಲೆಗೆ ಬೇಗ ಬಂದಿರ್ತಿರಾ ಮೇಷ್ಟ್ರುಗಳತ್ತಿರಾ ಗೋತ್ತಾಗದೆ ಇಲ್ಲದ್ದನ್ನ ಕೇಳಿ ತಿಳಿದುಕೊಳ್ಳೊದು ಬಿಟ್ಟು ಆಟ ಆಡ್ತಿರಾ ಆಟ ಅಂತ ಎರಡು ಬಾರಿಸಿದರು ಬಾಸುಂಡೆ ಬರುವ ಹಾಗೆ ಕೆನ್ನೆ ಮೇಲೆ.

ಆಗ ಇನ್ನೆನು ಬಂದೆ ಬಿಟ್ಟಿತು ಅಂದುಕೊಂಡೆ ಮತ್ತೆ full control ಮಾಡಿಕೊಂಡೆ.ಅಲ್ಲಿಗೆ ನನ್ನ ಸರದಿ ಮುಗಿತು next ನನ್ನ ಪಕ್ಕದವನದು ಅದೆ ಮನೆ ಹಾಳು IDEAದಲ್ಲಿ ಭಾಗಿಯಾಗಿದ್ದನಲ್ಲ ಅವನದು ಅವನಂತು ನನಗೆ ಹೋಡೆಯುವಾಗನೆ ಗಢ ಗಢ ನಡುಗುತ್ತಿದ್ದ. ಅಷ್ಟರಲ್ಲಿ ಜವಾನ ಬಂದು ಸರ್ DDPI office ನಿಂದ ಕರೆ ಬಂದಿದೆ ಅಂದ.
 
ಹೆಡ್ ಮಾಸ್ಟರ್: ಇವರದೆಲ್ಲಾ ಹೆಸರು ಬರಿಸಿಕೊಂಡು ಸಹಿ ಮಾಡಿಸಿಕೋ ಅಂತ ನಮ್ಮ ಪಿ.ಟಿ. ಮಾಸ್ಟರ್ ಗೆ ಹೇಳಿ ಇನ್ನೊಂದು ಸಲ ಎಲ್ಲಾದರು Free hour ನಲ್ಲಿ ಆಟ ಆಡೊದನ್ನ ನೋಡಿದರೆ ನಿಮ್ಮನ್ನ examಗೆ ಕುರಿಸೋದಿಲ್ಲ ನೋಡಿ ಅಂತ ಎಚ್ಚರಿಕೆ ಕೊಟ್ಟು ಹೋದರು.

ನಮ್ಮ ಹತ್ತಿರ ಸಹಿ ತಗೋಂಡು ನಮ್ಮನ್ನ class roomಗೆ ಹೊಗಿ ಅಂದ್ರು. ನಮ್ಮ ಸ್ನೇಹಿತರೆಲ್ಲಾ ನಿಟ್ಟುಸಿರು ಬಿಟ್ಟು ಬಚಾವಾದೇವು ಅಂದು class room ಕಡೆ ಹೊರಟರು. ಸುಮ್ಮನೆ ಮೊದಲು ಎಲ್ಲಿ ನಿಂತಿದ್ದೆನೊ ಅಲ್ಲೆ ನಿಂತಿದ್ದರೆ ಬಾಚವ್ ಆಗ್ತಾ ಇದ್ದೆ ಅಂತ ಮನಸ್ಸಿನಲ್ಲೆ ಅಂದುಕೊಂಡು ನಾನು ಬೇರೆ ದಿಕ್ಕಿನೆಡೆ ಹೊರಟೆ. ನಮ್ಮ ಪಿ.ಟಿ. ಮಾಸ್ಟರ್ ಮತ್ತೆ ಎಲ್ಲಿಗೆ ಹೊರಟೆ ನಿನಗೆ ಸ್ಪೆಷಲ್ ಹಾಗಿ ಹೇಳಬೇಕಾ class roomಗೆ ಹೋಗು ಅಂತ ಅಂದ್ರು.ತಡಿರಿ ಸಾರ್ Toiletಗೆ ಹೋಗಿ ಬರ್ತಿನಿ ಅಂತ ಅಂದು Toiletಗೆ ಹೋಗಿ class roomಗೆ ಹೋದೆ.

ಆವತ್ತಿನಿಂದ ಯಾವತ್ತು SSLC ಮುಗಿಯುವ ತನಕ Free hours ನಲ್ಲಿ ಶಾಲೆಯಲ್ಲಿ ಆಟ ಅನ್ನೊ ಸುದ್ದಿನೆ ತಗೆಯಲಿಲ್ಲ ಯಾಕೆ ಅಂದರೆ ಆಟ ಆಡೋಕೆ ಅಂತಾನೆ ಅಲ್ಲೆ ಹತ್ತಿರದಲ್ಲೆ ಇದ್ದಂತಹ ಓಂದು ಮೈದಾನವನ್ನ FIX ಮಾಡ್ಕೊಂಡೆವು.