ಅನುಮಾನಾಸ್ಪದ ರೀತಿಯಲ್ಲಿ ಅಂದು ರಘುಪತಿ ಭಟ್ಟರ ಪತ್ನಿಯ ಸಾವು
ನರ್ಸ್-ರೇಣುಕಾಚಾರ್ಯರ ಕತೆಯಿಂದ ಎಲ್ಲರಿಗೂ ಬಂತು ತಲೆನೋವು
ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದ ಸಂಪಂಗಿಯದು ನಿರ್ಲಜ್ಜ ಕತೆ
ಮಹಿಳಾ ಮಂತ್ರಿಯ ಕೈಬಿಡಬೇಕಾದುದರ ಹಿಂದೆಯೂ ಇತ್ತಲ್ಲ ವ್ಯಥೆ
ರಾಜ್ಯದ ಗಣಿಸಂಪತ್ತನ್ನು ಅಕ್ರಮವಾಗಿ ಸೂರೆಮಾಡುವ ಮಂತ್ರಿಗಳು ಅಲ್ಲಿ
ಸ್ನೇಹಿತನ ಪತ್ನಿಯನ್ನೇ ಅತಿಕ್ರಮಿಸಿ ಕೆಡಿಸಿದ ಈ ಮಂತ್ರಿಯ ಕತೆ ಇಲ್ಲಿ
ಅಂದು ಎಲ್ಲರಿಗೆ ನೈತಿಕತೆಯ ಪಾಠ ಹೇಳಿಕೊಂಡು ತಿರುಗುತ್ತಿದ್ದ ಪಕ್ಷ
ಅದೇ ಇಂದು ಅನೈತಿಕತೆಗೆ ಉದಾಹರಣೆಯಾಗಿ ನಿಂತಿಹ ದೊಡ್ಡ ಪಕ್ಷ
ಬಹುತೇಕ ಜನರ ಹಲವು ದಿನಗಳ ಕನಸಾಗಿತ್ತು ಈ ಭಾಜಪ ಸರಕಾರ
ಅದೇ ಜನರ ಕನಸನ್ನು ನುಚ್ಚು ನೂರಾಗಿಸುವಂತಿದೆ ಈಗ ಈ ಸರಕಾರ
ಹೆಣ್ಣು-ಹೊನ್ನು-ಮಣ್ಣು ಇವು ಮೂರಕ್ಕೂ ಸೋಲುತ್ತಿದ್ದಾರೆ ನಮ್ಮೀ ನಾಯಕರು
ತನ್ನದು ಪರರದು ಎನ್ನದೇ ಅತಿಕ್ರಮಿಸಿ ತಮ್ಮದಾಗಿಸಿಕೊಂಬ ಹುಂಬರು!!!
*****
ಆತ್ರಾಡಿ ಸುರೇಶ ಹೆಗ್ಡೆ
ಪ್ರತಿಕ್ರಿಯೆ (5)