ಪ್ರಾಚಿನ ಕಾಲದಿಂದಲೂ ಅತಿಥಿಗಳೆಂದರೆ ದೇವರು ಅಂತ ಭಾವಿಸುವುದೇ ನಮ್ಮ ದೇಶದ ಸಂಸ್ಕೃತಿ, ತಮಗೆ ಮಾಡಲು ಊಟವಿಲ್ಲದಿದ್ದರೂ, ಮನೆಗೆ ಬಂದ ಅತಿಥಿಗೆ ಊಟ ಮಾಡಿಸಿ ಸೇವೆ ಸತ್ಕಾರ ಮಾಡಬೇಕು. ನಾವು ಉಪವಾಸ ಮಲಗಿದರು ಸರಿ ಬಂದವರ ಹೊಟ್ಟೆ ತುಂಬಿಸಬೇಕು.
ಎಂಥಹ ಬಡವರಿದ್ದರೂ ಕೂಡಾ ಮನೆಗೆ ಬಂದವರಿಗೆ ಚಹದಿಂದ ಹಿಡಿದು ಊಟ ಮಾಡಿ ಹೋಗಿ ಅಂತ ಹೇಳುವವೇ ಹೊರತು(ಸಾಲ ಮಾಡಾದ್ರು ಸರಿ), ನಮ್ಮ ಅಸಹಾಯಕತನ ತೋರಿಸಿಕೊಳ್ಳೋದಿಲ್ಲ. ತಮಗೆ ಮಲಗಲು ಹಾಸಿಗೆ ಇಲ್ಲದಿದ್ದರೂ ಸರಿ ತಾವು ನೆಲದ ಮೇಲೆ ಮಲಗಿ, ಬಂದವರಿಗಾಗಿ ಸತ್ಕಾರ ಮಾಡುತ್ತಾರೆ. ಬಹುಶ ಇಂಥ ಗುಣ ನಡುವಳಿಕೆ ಗಳಿಂದಲೇ ಭಾರತ ಸಂಸ್ಕೃತಿ ಭಾಳ ಶ್ರೀಮಂತ ಸಂಸ್ಕೃತಿ ಅಂತ ಪಾಶ್ಚಿಮಾತ್ಯರು ಅಂದುಕೊಳ್ಳುವದು.
ಆದರೆ ಇಷ್ಟೊಂದು ಅತಿಥಿ ಸತ್ಕಾರ ಮಾಡಿಸಿಕೊಳ್ಳುವವರಲ್ಲಿ ಕೆಲವಾದರೂ ಮೂಲಭೂತ ಗುಣಗಳಿರಬಾರದೇ??
ಅವರವರ ಮನೆಯಲ್ಲಿ ಹೇಗಿದ್ದರೂ ಪರವಾಗಿಲ್ಲ, ಹೋದ ಕಡೆಯಾದರೂ ಸ್ವಲ್ಪ ಒಳ್ಳೆ ನಡುವಳಿಕೆ ಗಳಿಂದ ಇರಬಾರದೇ? ನಿಮ್ಮ ಮನೆ ಅಂದ್ಕೊಳ್ಳಿ ಅಂದ ಮಾತ್ರಕ್ಕೆ ನಿಮ್ಮನೆಯಲ್ಲಿ ಇರುವ ಹಾಗೆ ಇರುವದೆಷ್ಟು ಸರಿ?
ಅವರ ಮನೆಯಲ್ಲಿ ಕುಡಿದು ಬರ್ತಾರೆ ಅಂದ್ರೆ ಅತಿಥಿಯಾಗಿ ಹೋದ ಮನೆಯಲ್ಲೂ ಕುಡಿದು ರಾತ್ರಿ ತಡವಾಗಿ ಬರುವದು, ಕಷ್ಟಪಟ್ಟು ಮಾಡಿದ ಅಡುಗೆಗೆ ಹೇಸರಿಡುವದು, ಬೆಳಿಗ್ಗೆ ಮನಿಸ್ಸಿಗೆ ಬಂದಾಗ ಏಳುವದು, ಇವೆಲ್ಲ ಎಷ್ಟು ಸರಿರೀ??
ಕನಿಷ್ಠ ಇಂಥ ಸಣ್ಣ ಪುಟ್ಟ ವಿಷಯಗಳಲ್ಲೂ ಲಕ್ಷ್ಯ ಕೊಡಬಾರದೆನ್ರೀ?
ಅತಿಥಿಯೋಬ್ಬರಿಗೆ ಮನೆ ನಿಮ್ಮದೆಂದುಕೊಳ್ಳಿ ಅಂದ್ರೆ ಮನೆ ಒಡತಿಯೇ ನನ್ನವಳು ಅಂದನಂತೆ ಹಾಗಾಯಿತು ಪರಿಸ್ಥಿತಿ ಅಲ್ವೇನ್ರೀ??
-ಅಶ್ವಿನಿ
ಪ್ರತಿಕ್ರಿಯೆ (5)