ನಂಟು
ನನ್ನ ತವರಿನಂತೆ ಇಲ್ಲಿನ ಬೆಳಗು
ಹಕ್ಕಿಗಳ ಕಲರವವಿಲ್ಲದಿದ್ದರೂ......
ಸೂರ್ಯನಂತು ಮುನಿಸಿಕೊಂಡು
ಬೇಗ ಎದ್ದು ಬಿಡುತಾನೆ.......
ಸೂರ್ಯ ಕಿರಣ ಪರದೆಯೊಳಗೆ
ನುಸುಳುವುದಕ್ಕೆ ಪುರುಸೊತ್ತೇ ಇಲ್ಲ
ನನ್ನವರ ನವುಕರಿ ಗಾಡಿಯ ಸದ್ದು
ಒಮ್ಮೆ ನಸುನಕ್ಕು ಟಾಟಾ ಮಾಡಿ
ಬಾಗಿಲೆಳುದುಕೊಂಡರೆ ಮತ್ತೆ ಎಂದಿನಂತೆ
ಒಂಟಿ......
ಅಡಿಗೆಮನೆಯಿಂದ ಬಾಲ್ಕನಿಯವರೆಗೆ
ನನ್ನದೇ ರಾಜ್ಯಭಾರ......
ಕಡಿವಾಣವಿಲ್ಲದ ಹಾಳು ಹಾಳು ನೆನಪು .....
ದವದ್ದಾಯಿಸುತ್ತದೆ ನನ್ನವರ ಕಚೇರಿಗೂ
ಅವನ ಕೆಲಸ ,ಒತ್ತಡ,ಗೆಳೆಯ ಗೆಳೆತಿಯರ
ಕೇಕೆಯ ಮಧ್ಯೆ ಸದ್ದೇ ಇಲ್ಲದ ನನ್ನೆದೆಯ
ಬಡಿತ
ಸಂಜೆಯಾಗುತ್ತಿದ್ದಂತೆ ನನಗು ಬಾಲ್ಕನಿಗು
ಬಿಡದ ನಂಟು
ಸೂರ್ಯ ಮುಳುಗುವ ಹೊತ್ತಿಗೆ
ಅವ ಬರುವುದಿಲ್ಲವೆಂದು ಗೊತ್ತು
ಆದರೂ ಬಾಲ್ಕನಿಯದೊಂದು ಒತ್ತಾಸೆ .......
ಸ್ವಲ್ಪ ತಡಿ ಇನ್ನೇನು ಬಂದು ಬಿಡುತ್ತಾನೆ
ಎಂದು ಪಿಸುಗುಡುತಿದೆ ......
ಪವಿತ್ರ ಪ್ರಶಾಂತ್
ದುಬೈ
ಕೆಲವು ಸುಮ್ಮನೆ ಸಾಲುಗಳು
ಮಾತು ಸಾಕೆನಿಸಿದೆ ಮೌನ ಹಿತವೆನಿಸಿದೆ
ಬಾ ಜೊತೆಗೂಡಿ ನಕ್ಷತ್ರಗಳ
ಆರಿಸಿಕೊಳ್ಳೋಣ ಬೊಗಸೆ ತುಂಬಾ
......................................................
ಅಮಾವಾಸ್ಯೆಯ ಗಾಢ
ಕರಿ ಕತ್ತಲು
ನಿನ್ನ ಕಣ್ಣಲ್ಲಿ ಕೋಟಿ
ನಕ್ಷತ್ರ ತಾರೆಗಳು
.............................................................
ಪವಿತ್ರ ಪ್ರಶಾಂತ್
ದುಬೈ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮಳೆಯಲ್ಲಿ ಒ೦ದಷ್ಟು ಹೊತ್ತು......
ಮಳೆಯಲ್ಲಿ ಒ೦ದಷ್ಟು ಹೊತ್ತು......
ಪತಿಯ ಪ್ರೇಯಸಿಗೊ೦ದು ಪತ್ರ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (5)