ಸಖೀ
ಅಳುತ್ತಿದ್ದ ನಿನ್ನನ್ನು
ಸಂತೈಸಲು ಯತ್ನಿಸದೇ
ಸುಮ್ಮನೇ ನಿಂತಿದ್ದ
ನನ್ನನ್ನು ನಿಷ್ಕರುಣಿ
ಎನ್ನುವೆಯಾ ನೀನು?
ಅಲ್ಲಾ,
ಅಳುತ್ತಿದ್ದರೂ
ಹೆಚ್ಚುತ್ತಿದ್ದ
ನಿನ್ನ ಅಂದವನು
ಕಣ್ಣಿಂದಲೇ
ಸವಿಯುತ್ತಾ
ಅದನ್ನು ಬಣ್ಣಿಸಲು
ಮನದಲ್ಲಿ ಶಬ್ದಗಳ
ಹೆಣೆಯುತಿದ್ದ
ನನ್ನನ್ನು
ಮರುಳುಕವಿ
ಎನ್ನುವೆಯಾ ನೀನು?
*-*-*-*-*-*-*
ಆತ್ರಾಡಿ ಸುರೇಶ ಹೆಗ್ಡೆ
ಪ್ರತಿಕ್ರಿಯೆ (7)