ಕಸಾಯಿಖಾನೆಯಲ್ಲಿನ ಕಟುಕನಂತೆ
ವರ್ತಿಸಿ, ನರ್ತಿಸುತ್ತಿದ್ದ ಕಸಬನಿಗೆ ಗಲ್ಲು ಶಿಕ್ಷೆಯಂತೆ
ಅಮಾಯಕರನ್ನೆಲ್ಲಾ ಚಿತ್ರಹಿಂಸೆಕೊಟ್ಟು
ಪೀಡಿಸಿ ಕೊಂದವನಿಗೆ ಆರಾಮದ ಈ ಸಾವಂತೆ
ಅಳಿದವರ ನೆನೆಯುವಾಗ ಮರಣದಂಡನೆ
ಸೂಕ್ತ ಎಂದು ಎಲ್ಲರೂ ಹೇಳಬಹುದು ಅದು ಗೊತ್ತು
ಮಾಡಿದ ಪಾಪಕ್ಕೆ ಮರುಗುತ್ತಾ ಜೀವಿಸುವ
ಪರ್ಯಾಯ ವ್ಯವಸ್ಥೆಯ ಅಗತ್ಯ ಇಲ್ಲವೇ ಈ ಹೊತ್ತು?
ಸಾವಿಗಿಂತಲೂ ಶೋಚನೀಯ ಬದುಕಿನ
ವ್ಯವಸ್ಥೆಯೊಂದು ಆಗಬೇಕು ಇಂತಹ ಪಾಪಿಗಳಿಗೆ ಇಲ್ಲಿ
ತಮ್ಮ ಪಾಪಕರ್ಮಗಳಿಗಾಗಿ ಕ್ಷಣ ಕ್ಷಣವೂ
ಕೊರಗುತ್ತಾ ದಿನಕಳೆಯುವಂತಾಗಬೇಕು ಜೈಲಿನಲ್ಲಿ
ಗಲ್ಲು ಶಿಕ್ಷೆ ಒಮ್ಮೆಗೇ ಎಲ್ಲವನೂ ಮುಗಿಸಿ
ಮುಕ್ತಿಯನು ನೀಡಬಹುದು ಆ ಪಾಪಿ ಆತ್ಮಗಳಿಗೆ
ಪ್ರತಿ ಗಳಿಗೆಯೂ ಸಾವನ್ನೇ ಬೇಡುವಂತೆ
ರುದ್ರ ಭಯಂಕರ ಶಿಕ್ಷೆಗಳನ್ನು ನೀಡಬೇಕು ಪಾಪಿಗಳಿಗೆ
************
ಆತ್ರಾಡಿ ಸುರೇಶ ಹೆಗ್ಡೆ
ಪ್ರತಿಕ್ರಿಯೆ (6)