(೬) ಯಾವುದೇ ವಿಷಯದ ಬಗ್ಗೆ ನಾವೊಂದು ತೀರ್ಮಾನಕ್ಕೆ ಬಂದರೆ, ಅದರ ಬಗ್ಗೆ ನಾವು "ಸಾಕಪ್ಪ ಸಾಕು" ಎನ್ನಿಸುವಷ್ಟು ಸುಸ್ತು ಮಾಡಿಕೊಂಡಿದ್ದೇವೆ ಎಂದರ್ಥ!

(೭) ಆಶ್ಚರ್ಯಪಡುವುದೆಂದರೆ ಕಾಡೊಂದರಲ್ಲಿ ಕಳೆದುಹೋದಾತ ಅಚಾನಕ್ ಮುಖ್ಯ ರಸ್ತೆಯನ್ನು ಪ್ರವೇಶಿಸಿದಂತೆ! 

(೮) ಆಶಾವಾದಿಯಾಗಿರುವುದೆಂದರೆ ’ವರ್ತಮಾನ’ದ ಪರಿಷ್ಕೃತ, ಪರಿಪೂರ್ಣ ರೂಪವು ’ಭವಿಷ್ಯ’ದಲ್ಲಿ ಮಾತ್ರ ಸಾಧ್ಯವೆಂದು ಭಾವಿಸುವುದು.

(೯) ಕೊಲ್ಲುವುದೆಂದರೆ ಇತರರ ಬಾಬ್ತಿನಲ್ಲಿ ಕೊಲೆಗಾರನ ಅಂಶವೊಂದನ್ನು ಕೊನೆಗಾಣಿಸಿದಂತೆ.

(೧೦) ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ನಮ್ಮ ದೇಹವನ್ನು ಕೊನೆಗಾಣಿಸಿಕೊಳ್ಳುವ ಮೂಲಕ ಇತರರ ತೊಂದರೆಗಳನ್ನು ಕೊನೆಗೊಳಿಸುವುದಾಗಿದೆ.