ವಧೂವರರ

ಮೊದಲ ರಾತ್ರಿ

ಕೋಳಿ ಕೂಗಿನ

ಸದ್ದು ಕೇಳಿಸಿದಾಗ,

ರಾತ್ರಿ ಹೇಳಿತು

ಕ್ಷಮಿಸಿ

ನನಗೇಕೋ

ಜೊಂಪೇರುತ್ತಿದೆ

ನಾನಿನ್ನು ನಿದ್ರಿಸುತ್ತೇನೆ,

ಸರಿಯೆಂದ

ವಧೂವರರು,

ರಾತ್ರಿಗೇ

ನುಡಿದರು "ಶುಭರಾತ್ರಿ"!

- ಆತ್ರಾಡಿ ಸುರೇಶ ಹೆಗ್ಡೆ