ನಾನು*:
ಇಂದೇಕೋ
ಬಾಲ್ಯದ ನೆನಪುಗಳು
ಮೇಳೈಸುತ್ತಿವೆ
ಈ ನನ್ನ
ಮನದಂಗಳದಲ್ಲಿ,
ಹನಿಗಳು
ಬೇಡ ಬೇಡವೆಂದರೂ
ಹೆಪ್ಪುಗಟ್ಟುತ್ತಿವೆ
ಈ ಕಂಗಳಂಚಿನಲ್ಲಿ!
ಆತ**:
ಈ ನಿನ್ನೆಗಳೇ ಹಾಗೆ
ಮೆಲುಕು ಹಾಕುತ್ತಿದ್ದಷ್ಟೂ
ಕೊಡುತ್ತವೆ ಈ ಮನಸ್ಸಿಗೊಂದಷ್ಟು
ಸವಿಯಾದ ನೋವು,
ಈ ನಾಳೆಗಳೇ ಹೀಗೆ
ಎಣಿಸಿದಷ್ಟೂ ಆಗುತ್ತದೆ
ಈ ಮನಸ್ಸು
ಕಹಿಯಾದ ತಾವು!
ನಾನು*: ಆತ್ರಾಡಿ ಸುರೇಶ ಹೆಗ್ಡೆ
ಆತ**: ಆತ್ರಾಡಿ ಪೃಥ್ವಿರಾಜ ಹೆಗ್ಡೆ
ಇದು ನನ್ನ ಅನುಜ ಮತ್ತು ನನ್ನ ನಡುವೆ ಜಂಗಮ ದೂರವಾಣಿಗಳ ಮೂಲಕ ನಡೆದ ಸಂದೇಶಗಳ ವಿನಿಮಯ.
ಪ್ರತಿಕ್ರಿಯೆ (2)