
ಬಾಳ ಬತ್ತಳಿಕೆಯಲ್ಲಿ ನಾಲ್ಕು
ಆಸೆಗಳ ಪೈರುಗಳನು ನೆಟ್ಟಿರುವೆ
ಚಿಗುರು ಕೊನರುಗಳೊಡೆಯ ಬೇಕು
ಸರಿದು ಹೋಗುವುದೇ ಈ ಕತ್ತಲು ?.
ನಾಳೆ ಉದಯಿಸುವ ಸೂರ್ಯನಿಗಾಗಿ
ಹಲವಾರು ವರ್ಷಗಳಿಂದ ಕಾಯುತಿರುವೆ !.
ಬೆಳ್ಳಿಯ ಬೆಳದಿಂಗಳಾದರು ಬರಬಹುದಿತ್ತು
ಆದರೂ ಸೂರ್ಯನ ಮೇಲೆ ಪೂರ್ಣ ವಿಶ್ವಾಸ !.
ನಾ ನೆಟ್ಟ ಪೈರುಗಳು ಎಲ್ಲಿ ನೆಟ್ಟಿರುವೆನೋ ?
ಅದು ಉತ್ತಮವಾದ ನೆಲವೋ ಎಂತೊ ?
ಬಂಜರಾದರು ಪರವಾಗಿಲ್ಲ
ಮರಭೂಮಿಯಾಗದಿದ್ದರೆ ಸಾಕು.
ನನ್ನ ಆಸೆಗಳಿಗೆ ಜೀವ ಬಂದೊಡೆ ?
ನನ್ನ ಪೈರುಗಳಲ್ಲಿ ಚಿಗುರುಗಳು ಮೂಡಿದೊಡೆ ?
ನನ್ನ ಬವಣೆಗಳನ್ನು ಬದಿಗಿಟ್ಟು
ಏರಿ ಹೋಗಲು ಎತ್ನಿಸುತ್ತೇನೆ.
ನಾ ನಡೆದು ಬಂದ ದಾರಿ
ಮುಳ್ಳಿನ ಹಾದಿ ಎಂದು ಗೊತ್ತು !.
ನನ್ನ ರಕ್ತವನ್ನು ಸವಿಯಲು
ಹಲವು ತೋಳಗಳು ಹವಣಿಸುತ್ತಿವೆಯೆಂದು ಗೊತ್ತು !.
ನನ್ನ ಬದುಕಿನಲ್ಲಿ ಗಾಡ ಅಂಧಕಾರ
ಆವರಿಸಿದೆಯೆಂದು ಗೊತ್ತು !.
ಆದರೂ ?
ನಾಳೆ ಬರುವ ಬೆಳಕಿನ ಮೇಲೆ
ಪೂರ್ಣ ವಿಶ್ವಾಸವನ್ನಿರಿಸಿಕೊಂಡಿರುವೆ.
ನಾಳೆ ಮೂಡುವ ಚಿಗುರುಗಳಿಗಾಗಿ ಕಾದು ಕುಳಿತಿರುವೆ.
ಮೂಡಿಬಂದಾನೆ ಆ ನನ್ನ ಸೂರ್ಯ ????...
ವಸಂತ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!