ಚಿನ್ನದ ಸರ..!
ತರಲಿಲ್ಲವೆಂದು ನನ್ನಾಕೆಗೆ ಬೇಸರ.
ಆ ರಾತ್ರಿ..ಅವಳು
ಅ..............ಲ್ಲಿ !
ಅವಳೊಳಗಡಗಿರುವ ಅಹಂ
ನನ್ನಾಚೆಗೆ ನೂಕಿತು
ನನ್ನ ಅಹಮ್ಮುಗಳ ಕಿತ್ತು
ಅವಳಲ್ಲಿ ಅಡಗಬೇಕೆಂದು ಕೊಂಡಿದ್ದೆ
ಆದರೆ,
ಅದಕಾಗಿ ನನಗೆ ವಾರವಿಡಿ ಹಾಸಿಗೆ ಪಥ್ಯ !
ಕಾಲ ನಡುವೆ ತಲೆದಿಂಬು
ನನಗೀಗ
ಸಂಬಳದ ಮೊದಲ ದಿನ.
ಸರವ ತಂದಿತ್ತಾಗ
ಅವಳಿಗೆ,
ತಿಂಗಳದ ಕೊನೆಯ ದಿನ..........!
ನನ್ನಾಕೆಗೆ ಈಗ ಮೂರು ದಿನ ಪಥ್ಯ
ಪ್ರತಿಕ್ರಿಯೆ (3)