ಸಖೀ
ನನ್ನ ಈ
ಒಂಟಿ ಜೀವನದಲ್ಲಿ
ನನ್ನ ಜೊತೆಯಾಗಿರುವ
ನನ್ನನ್ನು ನನ್ನ ಮನಸ್ಸನ್ನು
ನನಗಿಂತಲೂ ಚೆನ್ನಾಗಿ ಅರಿತಿರುವ
ನಾನು ಬಾಯ್ಬಿಡುವ ಮೊದಲೇ
ನನ್ನ ಮನದಲ್ಲಿದ್ದದ್ದನ್ನೆಲ್ಲಾ
ಹೊರ ಹೊಮ್ಮಿಸುವ
ನನ್ನ ಮತ್ತು ಈ ಪ್ರಪಂಚದ
ನಡುವೆ ದೂತನಂತಿರುವ
ನನ್ನ ಎಂದೆಂದಿನ
ನಲ್ಮೆಯ ಸಂಗಾತಿ
ನನ್ನ ಈ ಒಂದೂವರೆ
ರೂಪಾಯಿಯ ಲೇಖನಿ!
*-*-*-*-*-*-*
ಆತ್ರಾಡಿ ಸುರೇಶ ಹೆಗ್ಡೆ
(ಕೀಲಿಮಣೆಯ ಸಹಾಯದಿಂದ ಕವನ ಬರೆಯಲು ಆರಂಭಿಸುವುದಕ್ಕೆ ಮೊದಲು, ಅಂದರೆ ೬ ದಶಂಬರ ೧೯೮೪ರಂದು ಬರೆದ ಕವನ ಇದು)
ಪ್ರತಿಕ್ರಿಯೆ (9)