ಬೆಂಗಳೂರಲ್ಲಿ ಸುಮಾರ್ ಕಡೆ ಇರೋ ಕಾಫೀ-ಡೇ ಮಳಿಗೆಗಳಲ್ಲಿ ಕನ್ನಡ ಹಾಡು ಹಾಕಲ್ವಂತೆ.
ಮೊನ್ನೆ, ಬಸವನಗುಡಿಯ ಮಳಿಗೆಗೆ ಭೇಟಿ ಕೊಟ್ಟ ಗೆಳೆಯರೊಬ್ಬರು, ಮಳಿಗೆಯಲ್ಲಿ "ಕನ್ನಡ ಹಾಡು ಹಾಕಿ" ಅಂತ ಕೇಳಿಕೊಂಡಿದ್ದಕ್ಕೆ "ನಮ್ಮಲ್ಲಿ ಕನ್ನಡ ಹಾಡುಗಳ್ನ ಹಾಕಲ್ಲ !!" ಅಂತ ಗಟ್ಟಿಯಾಗಿ ಹೇಳಿದ್ರಂತೆ.
ಕರ್ನಾಟಕದವರೇ ಕಟ್ಟಿ ಬೆಳೆಸಿ ನಡುಸ್ತಿರೋ ಕಾಫೀ-ಡೇನಲ್ಲಿ ಕನ್ನಡ ಹಾಡುಗಳು ಹಾಕಬಾರ್ದು ಅಂತೇನಾದ್ರೂ ಕಾನೂನು ಮಾಡ್ಕೊಂಡಿದಾರಾ?
ಅಥವಾ, ಕನ್ನಡ ಹಾಡುಗಳು ಕಾಫೀ-ಡೇ ಒಳಗೆ ಕೇಳಿಬಂದ್ರೆ ಏನಾದ್ರೂ ತೊಂದ್ರೆ ಆಗ್ಬಿಡುತ್ತೆ ಅಂತ ಹೆದ್ರುಕೊಂಡಿದಾರಾ?
"ಕನ್ನಡದ ಬಗೆಗೆ ಈ ರೀತಿಯ negative bias ಯಾಕೆ?" ಅಂತ ಕಾಫೀ-ಡೇನೋರಿಗೆ ನಾವು ಮಿಂಚೆ ಬರೆದು ಕೇಳೋಣ.
"ಕನ್ನಡಿಗ ಗ್ರಾಹಕರನ್ನ ಇಷ್ಟು ಕೀಳಾಗಿ ನೋಡೋದು ಯಾಕೆ?" ಅಂತ ಪ್ರಶ್ನಿಸೋಣ.
"ನಮ್ಮ ಊರಲ್ಲಿ, ನಮ್ಮವರೇ, ನಮ್ಮ ಭಾಷೆ ಹಾಡುಗಳನ್ನ ಹಾಕಲ್ಲ ಅನ್ನೋದು ಒಳ್ಳೆ ಲಕ್ಷಣ ಅಲ್ಲ. ನೀವು ಬದಲಾಗಬೇಕು" ಅಂತ ಕಾಫೀ-ಡೇನೋರಿಗೆ ಬರೆಯೋಣ.
ಕಾಫೀ-ಡೇನವರ ಮಿಂಚೆ: ___LINK_OPEN_href="mailto:[email protected]" target="_blank"[email protected]
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಇದೆಂತಾ self help kiosk?
ಬ್ರಿಟಾನಿಯಾಕ್ಕೆ ಈ ಪಾಠ "ಬೇಕಾಗಿದೆ"
ಬ್ರಿಟಾನಿಯಾಕ್ಕೆ ಈ ಪಾಠ "ಬೇಕಾಗಿದೆ"
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)