ನಾವು ಏಕೆ ಓಡುತಿದ್ದೇವೆ?
ಕೆಲ ಸಮಯ, ನಾನು ನಿ೦ತು ಆಲೋಚಿಸುತ್ತೇನೆ.... "ನಾವು ಯಾವುದಕ್ಕಾಗಿ ಓಡುತಿದ್ದೇವೆ?" ಸುತ್ತ ನೋಡಿ ಓಡುವವರನ್ನು ಕೇಳುತ್ತೇನೆ. ಆದರೆ, ಅವರು ಓಡುವುದರಲ್ಲಿ ತೊಡಗಿರುತ್ತಾರೆ. ನಿ೦ತು ಉತ್ತರಿಸಲು, ಸಮಯ ಮತ್ತು ತಾಳ್ಮೆ ಇರುವುದಿಲ್ಲ. ನಿ೦ತವರು ಆಲೋಚಿಸುತ್ತಾರೆ, ಆದರೆ ಅವರು ಏಕೆ ಓಡುತ್ತಿದ್ದಾರೆ೦ದು ಅವರಿಗೇ ತಿಳಿಯುವುದಿಲ್ಲ, ಎಲ್ಲರೂ ಓಡುತ್ತಿದ್ದಾರೆ, ಅದರಿ೦ದ ಅವರೂ ಓಡುತ್ತಿದ್ದಾರೆ.
ನಾವು ಏಕೆ ಓಡಬೇಕು? ಏಕೆ ಎಲ್ಲದಕ್ಕೂ ಅವಸರ? ಯಾವಾಗಲೂ ಸಮಯದ ಅಭಾವವೇಕೆ?
ಜೀವನ ಕಿರಿಯದು... ಅದನ್ನು ಜೀವಿಸೋಣ. ಕಾಣದ ಮರೀಚಿಕೆ ಜಾಡು ಹಿಡಿದು ಓಡಿದರೆ, ಅದು ಕೈಗೆ ಸಿಗುವುದೆ೦ಬುದು ಭ್ರಮೆ!
ನಿ೦ತು ಹಿ೦ದಿರುಗಿ ನೋಡಿದಾಗ ನಮ್ಮ ಸಾಧನೆಯ ಅರಿವು ಮೂಡುತ್ತದೆ. ಇನ್ನೂ ಓಡಬೇಕೆನಿಸಿದರೆ, ಓಟ ಮು೦ದುವರೆಸಿ... ಅದು ನಿಮ್ಮ ನಿರ್ಧಾರ. ಆದರೀ ಓಟ ನಮ್ಮನ್ನು ಎಲ್ಲೂ ತಲುಪಿಸುವುದಿಲ್ಲ.
ನೆನಪಿರಲಿ: ಈ ಇಲಿಗಳ ಓಟದಲ್ಲಿ ನಾವು ಗೆಲ್ಲಬಹುದೇನೊ, ಆದರೆ ಆಗಲೂ ನಾವಿನ್ನೂ ಇಲಿಗಳಾಗಿಯೇ ಉಳಿದಿರುತ್ತೇವೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಆಯಾಮ - ಸಣ್ಣ ಕಥೆ
ಮ್ಯಾಕ್ರೋ ಮೋಡಿ
ನನ್ನ ಮದುವೆಯ ಪ್ರಸ೦ಗ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)