ವರ್ಷಕ್ಕೊಂದು ಬಾರಿ ನಡೆಯುವ ಅಮರನಾಥ ಯಾತ್ರೆಯಿಂದ ಎಷ್ಟು ಪರಿಸರ ನಾಶ ಆಗಬಹುದು? ಊಹಿಸಿ.. ಕಾಶ್ಮೀರದ ಮುಲ್ಲ ಒಬ್ಬನ ಪ್ರಕಾರ ಅಮರನಾಥ ಯಾತ್ರಿಗಳ ಸಂಖ್ಯೆ ಜಾಸ್ತಿ ಇರಬಾರದಂತೆ. ಜಾಸ್ತಿಯಾದಷ್ಟು ಅಲ್ಲಿನ ಪರಿಸರ ಹಾಳಾಗುತ್ತಂತೆ. ನೆನ್ನೆ ಪ್ರಸಿದ್ಧ ಇಂಗ್ಲಿಷ್ ವಾರ್ತಾ ವಾಹಿನಿಯಲ್ಲಿ ಆತ ನೀಡಿದ ಹೇಳಿಕೆಯಿದು. ಕೇಳಿ ನಗುವುದೋ ಅಳುವುದೋ ತಿಳಿಯದಾಯಿತು. ತಾನು ಯಾತ್ರೆಗೆ ವಿರೋಧವಲ್ಲ ಎಂಬ ಮುಚ್ಚಳಿಕೆ ಬೇರೆ ಆತನದು.

 

ಕಳೆದ ತಿಂಗಳಿನಿಂದ ನಿತ್ಯವೂ ನಡೆಯುತಿರುವ ಹಿಂಸೆಯಿಂದ, ಸುಟ್ಟ ಟೈರು, ಬಸ್ಸು, ಕಟ್ಟಡಗಳಿಂದ ಆಗದ ಪರಿಸರ ನಾಶ ಈ ಯಾತ್ರೆಯಿಂದ ಆಗುತ್ತಂತೆ? ಇದು ಪರಿಸರ ಕಾಳಜಿಯೋ ಅಥವಾ ಯಾತ್ರಿಕರನ್ನು ಬೆದರಿಸುವ ಹುನ್ನಾರವೋ? 

 

ಅದೇ ಟಿವಿ ಯಾತ್ರಿಕರನ್ನು ಕೂಡ ಸಂದರ್ಶಿಸಿತ್ತು. ಅದರಲ್ಲೊಬ್ಬ ಯಾತ್ರಿ ಮಹಿಳೆ "ನಾವು ಯಾತ್ರೆಗಾಗಿ ಬಂದಿದ್ದೇವೆ, ಜಗಳಕ್ಕಲ್ಲ, ದಯವಿಟ್ಟು ನಮಗೆ ಯಾವುದೇ ಹಾನಿ ಮಾಡಬೇಡಿ" ಎಂದು ಕೇಳಿಕೊಂಡಿದ್ದು ಕೇಳಿ ನನಗೆ ದುಖ್ಖ, ಸಿಟ್ಟು ಒಟ್ಟಿಗೆ ಬಂತು. ನಮ್ಮದೇ ದೇಶದಲ್ಲಿರುವ ಯಾತ್ರಾಸ್ಥಳಕ್ಕೆ ಹೋಗಲು ನಾವು ದೈನೇಸಿ ತರಹ ಬೇಡುವ ಪರಿಸ್ಥಿತಿ ಬಂತಲ್ಲ ಎಂದು.

 

ಈ ಕಾಶ್ಮೀರದ ಪರಿಸರ ಜಾಗೃತಿಯ ಬಗ್ಗೆ ಓದಲು ಕೆಳಗಿನ ಕೊಂಡಿ ನೋಡಿ :

http://kashmirnewz.org/s0014.html

 

ಇನ್ನು ಯಾತ್ರಿಗಳಿಗೆ ಹೊಸದಾಗಿ ವಿಧಿಸಿರುವ ಸುಂಕದ ಕಥೆ (ಜಜಿಯ) ಇಲ್ಲಿದೆ :

http://israelmilitary.net/showthread.php?t=14809

 

ಮೊದಲಿನ ಬರಹಗಳಂತೆ ಈ ಬರಹವೂ ಕೂಡ ಹಗ್ಗ ಜಗ್ಗಾಟವಾಗಲು ನನಗೆ ಇಷ್ಟವಿಲ್ಲ. ಪುನಃ ಪುನಃ "ಇದೇ ರೀತಿಯ ಬರಹಗಳನ್ನು ಹಾಕಬೇಡಿ" ಎನ್ನುವ ಸಲಹೆ ನನಗೆ ಬೇಕಿಲ್ಲ. ಅದಕ್ಕೇ ಬ್ಲಾಗಿನಲ್ಲಿ ಹಾಕಿದ್ದೇನೆ.