ಗೆಳೆಯರೇ.....!
ಮಾನವೀಯತೆ ಮರೆತು
ಹೊತ್ತೊಡಲ ಬಂಜೆಯಾಗಿಸುವ
ಛಲವೇಕೆ ?
ಶುದ್ಧುಸಿರು,ಹಸಿರು ಬೆಳೆ
ನೀಡುವ ನನ್ನೊಡಲಿಗೆ
ಕೊಡಲಿಯೇಟು ಹಾಕುವ
ಕಟುಕರಾದಿರೇಕೆ ?
ಸಾಯದಿರಿ...ಸಾಯಿಸದಿರಿ !
ತಾಯ್ ತಲೆಯ ಬೋಳಾಗಿಸಿ
ವಿಧವೆಯ ಪಟ್ಟ ಕಟ್ಟುವ ಹಂಬಲ ಬಿಟ್ಟು
ನಿಮ್ಮ ಹೊಲದ ಬದಿಯಲ್ಲಾದರೂ
ಬೆಳೆಯುವ ಅವಕಾಶ ಕೊಡಿ ದಯವಿಟ್ಟು...
( ಸಂಪದದಲ್ಲಿ ಮಹಿಳಾ ಸಾಹಿತಿ ಹಾಗೂ ಕವಿಗಳಿಗೆ ದೊರೆಯುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ ಅರ್ಪಿಸುವೆ)
ಪ್ರತಿಕ್ರಿಯೆ (3)