೧
ಅಯ್ಯೋ ಮಗ್ನೇ
ಮತ್ತೆ ಪರೀಕ್ಷೆಯಲ್ಲಿ ಸೊನ್ನೆ ತಂದಿದ್ದೀಯ
ಈ ಅಪ್ಪನ ಮಾನ
ಹಾರಜು ಮಾಡಲು ಯಾಕೆ ಹುಟ್ಟಿದ್ದೀಯ
ಈ ರೀತಿ ಫೇಲಾದ್ರೆ
ನಿನಗೊಂದೇ ಭವಿಷ್ಯ- ದೇಶದ ರಾಜಕೀಯ!
೨
ಒಡೆದ ಹಾಲನ್ನ ಬಿಸಾಕದಿರಿ ಸ್ವಾಮಿ
ನಾಳೆ ಅದೇ ಹುಳಿ ಮಜ್ಜಿಗೆಯಾಗಬಹುದು
ಗಲ್ಲಿಯ ಗೂಂಡಾಗಳನ್ನ ಜರೆಯದಿರಿ ಸ್ವಾಮಿ
ನಿಮ್ಗೊತ್ತಿಲ್ಲ... ನಾಳೆ ಇವರಲ್ಲೇ ಒಬ್ಬ ಸಚಿವನಾಗಬಹುದು!
೩
ಸಭೆಯಲ್ಲವನು ಘೋಷಿಸುತ್ತಿದ್ದ
"ಮಾನ್ಯ ಸಚಿವರು ಆಗಮಿಸಿದ್ದಾರೆ"
ಆಗಲೆ ಒಂದು ಮೊಬೈಲ್ ಹಾಡಿತು
"ಹೊಡಿ ಮಗ ಹೊಡಿ ಮಗ ಬಿಡಬೇಡ ಅವ್ರ್ನ"
೪
ಒಂದು ಗೋಣಿಯೊಂದಿಗೆ
ಧರಣಿ ಮುಗಿಸಿ
ಅಪ್ಪ ಮನೆಗೆ ಬಂದ;
ರಸಗೊಬ್ಬರ ಸಿಗದೆ
ಸಚಿವರ ಆಶ್ವಾಸನೆಗಳೇ
ಅಪ್ಪನ ಗೋಣಿ ತುಂಬ
೫
ಇದು ಎಂಥಾ ರಾಜಕೀಯವಯ್ಯಾ....
ಗೌಡ್ರ ಆರೋಪ, ಸಿದ್ದು ಪ್ರಕೋಪ
ಯಡ್ಡಿ ಕಣ್ಣೀರು, ನಿಂತ ಕಲಾಪ
ಧರಣಿ, ಮುಷ್ಕರ, ಲಾಠಿ ಚಾರ್ಜ್,
ಇಷ್ಟೆಲ್ಲಾ ಗುಲ್ಲೆಬ್ಬಿಸಿದ
ಯೋಜನೆಯ ಹೆಸರು "ನೈಸ್"!!!
(ವೆರಿ ನೈಸ್)
ಮೊದಲೆರಡು ಚುಟುಕುಗಳು ಅನುವಾದಿತ. ಮಿಕ್ಕಿದ್ದು ರಾಜ್ಯ/ರಾಷ್ಟ್ರ ರಾಜಕೀಯ ಪ್ರೇರಿತ...
೧
ಅಯ್ಯೋ ಮಗ್ನೇ
ಮತ್ತೆ ಪರೀಕ್ಷೆಯಲ್ಲಿ ಸೊನ್ನೆ ತಂದಿದ್ದೀಯ
ಈ ಅಪ್ಪನ ಮಾನ
ಹಾರಜು ಮಾಡಲು ಯಾಕೆ ಹುಟ್ಟಿದ್ದೀಯ
ಈ ರೀತಿ ಫೇಲಾದ್ರೆ
ನಿನಗೊಂದೇ ಭವಿಷ್ಯ- ದೇಶದ ರಾಜಕೀಯ!
೨
ಒಡೆದ ಹಾಲನ್ನ ಬಿಸಾಕದಿರಿ ಸ್ವಾಮಿ
ನಾಳೆ ಅದೇ ಹುಳಿ ಮಜ್ಜಿಗೆಯಾಗಬಹುದು
ಗಲ್ಲಿಯ ಗೂಂಡಾಗಳನ್ನ ಜರೆಯದಿರಿ ಸ್ವಾಮಿ
ನಿಮ್ಗೊತ್ತಿಲ್ಲ... ನಾಳೆ ಇವರಲ್ಲೇ ಒಬ್ಬ ಸಚಿವನಾಗಬಹುದು!
೩
ಸಭೆಯಲ್ಲವನು ಘೋಷಿಸುತ್ತಿದ್ದ
"ಮಾನ್ಯ ಸಚಿವರು ಆಗಮಿಸಿದ್ದಾರೆ"
ಆಗಲೆ ಒಂದು ಮೊಬೈಲ್ ಹಾಡಿತು
"ಹೊಡಿ ಮಗ ಹೊಡಿ ಮಗ ಬಿಡಬೇಡ ಅವ್ರ್ನ"
೪
ಒಂದು ಗೋಣಿಯೊಂದಿಗೆ
ಧರಣಿ ಮುಗಿಸಿ
ಅಪ್ಪ ಮನೆಗೆ ಬಂದ;
ರಸಗೊಬ್ಬರ ಸಿಗದೆ
ಸಚಿವರ ಆಶ್ವಾಸನೆಗಳೇ
ಅಪ್ಪನ ಗೋಣಿ ತುಂಬ
೫
ಇದು ಎಂಥಾ ರಾಜಕೀಯವಯ್ಯಾ....
ಗೌಡ್ರ ಆರೋಪ, ಸಿದ್ದು ಪ್ರಕೋಪ
ಯಡ್ಡಿ ಕಣ್ಣೀರು, ನಿಂತ ಕಲಾಪ
ಧರಣಿ, ಮುಷ್ಕರ, ಲಾಠಿ ಚಾರ್ಜ್,
ಇಷ್ಟೆಲ್ಲಾ ಗುಲ್ಲೆಬ್ಬಿಸಿದ
ಯೋಜನೆಯ ಹೆಸರು "ನೈಸ್"!!! (ವೆರಿ ನೈಸ್)
ಮೊದಲೆರಡು ಚುಟುಕುಗಳು ಅನುವಾದಿತ. ಮಿಕ್ಕಿದ್ದು ರಾಜ್ಯ/ರಾಷ್ಟ್ರ ರಾಜಕೀಯ ಪ್ರೇರಿತ...
ಪ್ರತಿಕ್ರಿಯೆ (12)