ಆ  ದಿನ...........

   ಕೆರೆಯ  ದಂಡೆಯ ಮೇಲೆ  ನಾವಿಬ್ಬರೆ !

 

  ತಂಪುಗಾಳಿಗೆ  ಗಿಡವ ತಬ್ಬುವ ತವಕ

  ಮುಳುಗುವ ಸೂರ್ಯನ ಕೆಂಪು ನಗು

  ಮರೆಮಾಡುವ ಮೋಡಗಳ ಕುಹಕ

  ನೇಸರ ಕಿರಣ ಪ್ರತಿಫಲಿತ  ತಟಸ್ಥ ಜಲದಲ್ಲಿ

  ಅವಳೆಸೆದ ಕಲ್ಲಿನ ಪುಟ್ಟ  ಅಲೆಗಳ

  ಚಕ್ರ ರಂಗೋಲಿ !

   ಮೌನ  ಆವರಿಸಿಹ
 
  ನಮ್ಮಿಬ್ಬರ  ನಡುವೆ....ಗೊಂದಲದ ಗೋಡೆ

  ಅವಳೆಂದಳು.......
 
  ಪ್ರೀತಿ  ದೂರದ  ಬೆಟ್ಟ...! ಹತ್ತಿರದಿ  ಬಹುಕಷ್ಟ !
 
   ಬಿಟ್ಟು ಬಿಡು.........
 
   ನಾನೆಂದೆ.......
 
   ದೂರದಿಂದಲೆ ಕಂಡು ಸುಖಿಸುವ ಬದಲು

  ಹತ್ತಿರದಿ ಜೊತೆಗೂಡಿ  ನಿಂತು ಗೊಂದಲದ ಮುಳ್ಳು  ಮುರಿದು

  ಹೊಸ ಕನಸಿನ ಮಹಲು ಕಟ್ಟಿ ,
   
  ಬಯಕೆಯ ಬಾಗಿಲು ತಟ್ಟೋಣ !

  ಆಗಷ್ಟೇ....

  ಮುಳುಗಿದ ಸೂರ್ಯನ ಕಂಡು

  ಅವಳು ಕಿಲಕಿಲನೆ ನಕ್ಕಳು

 ಕೆರೆಯ  ದಂಡೆಯ ಮೇಲೆ ಈಗ..........  ನಾವಿಬ್ಬರೇ.... !