ಅಭಿಮಾನಿ, ನಿಜವಾಗಿಯೂ ನಿಮ್ಮ ಅಭಿಮಾನದ ಮತ್ತು
ನನ್ನ ತಲೆಗೆ ಏರಿ ಹುಚ್ಚನಾಗಿದ್ದೇನೆ ನಾನು ಈ ಹೊತ್ತು
ದೂರದಲಿ ಕೂತು ಅದೆಷ್ಟು ಮಾತುಗಳನ್ನು ಆಡಿದರೂ ನನಗೆ
ತೃಪ್ತಿಯೇ ಇಲ್ಲ ಒಮ್ಮೆ ಮುಖಾಮುಖಿ ಸಿಗಬೇಕು ನಾನು ನಿಮಗೆ
ದೂರದಿಂದಲೇ ನನ್ನ ಮನವ ತುಂಬಿದವರ ಕಣ್ತುಂಬಿಕೊಳ್ಳೋ ಆಸೆ
ನಿಮ್ಮ ಕಣ್ಣೊಳಗೆ ನನ್ನ ಬಿಂಬವ ನನ್ನೀ ಕಂಗಳಿಂದ ನೋಡುವಾಸೆ
ಎಲ್ಲಿಯದೋ ಬಂಧ ಇಂದು ಇಲ್ಲಿ ಇಳೆಯೊಳಗೆ ಈ ರೀತಿ ಸ್ಪಂದಿಸಿದೆ
ಮಾತಿಲ್ಲದೇ ಸದ್ದಿಲ್ಲದೇ ಅರಿಯದೇ ನಮ್ಮನ್ನು ಅದು ಹೇಗೆ ಬಂಧಿಸಿದೆ?
*******************************
ಆತ್ರಾಡಿ ಸುರೇಶ ಹೆಗ್ಡೆ
ಪ್ರತಿಕ್ರಿಯೆ (5)