ಭಾಗ್ವತರ "ಮತ್ತು-ಹೊತ್ತು ಮುಳುಗುವ........ಹೊತ್ತು" ಸಂಪದದಲ್ಲಿನ ಕವನ ಓದುತ್ತಿದ್ದಂತೆ ಅದಕ್ಕೆ ಪೂರಕವಾಗಿ ನಮ್ಮೂರಲ್ಲಿ ನಡೆದ ಈ ಅಪಘಾತ ನೆನಪಾಗಿ ಹೀಗೆ ಚಿತ್ರ ಹಾಕುವಂತಾಯಿತು.

ಮಳೆಗಾಲ ಆರಂಭವಾಯಿತು ಎಂದಕೂಡಲೆ ನಮ್ಮೂರಿನ ಟಾರ್ ರಸ್ತೆ ಟ್ರಾಫಿಕ್ ನಿಂದ ತುಂಬಿ ತುಳುಕಾಡತೊಡಗುತ್ತದೆ. ಅಲ್ಲಿಯವರೆಗೆ ವಿಜಯಮಲ್ಯ ಮತ್ತುಖೋಡೆಯ ಭಕ್ತರುಗಳು ರಸ್ತೆಯ ತುಂಬೆಲ್ಲಾ ಹೇಗೆ ನಡೆದರೂ ಗಾಡಿ ಓಡಿಸಿದರೂ ಓ ಕೆ. ಆದರೆ ಜೋಗಕ್ಕೆ ಜನ ನುಗ್ಗುವ ಆತುರದಲ್ಲಿ ನಮ್ಮೂರಿನ ಈ ಭಕ್ತರು ಜೀವ ಕಳೆದುಕೊಳ್ಳುತ್ತಾರೆ. ಈ ಅಪಘಾತ ನಡೆದದ್ದು ಮಟಮಟ ಮಧ್ಯಾಹ್ನ ಹನ್ನೊಂದು ಘಂಟೆಯಲ್ಲಿ. ಅಷ್ಟೊತ್ತಿಗೆ ಪರಮಾತ್ಮನನ್ನು ಆಹ್ವಾನಿಸಿದ್ದ ಸವಾರನಿಗೆ ಜಸ್ಟ್ ಮೂವತ್ತೈದು ವರ್ಷ . ಹೆಂಡತಿ ತಾಯಿ ಮಗು ಇದ್ದಾರೆ. ಶ್ರಮ ಜೀವಿಯಾಗಿದ್ದ ಈತ ಮತ್ತಿನ ಗುಂಗಿಗೆ ಒಳಗಾಗಿದ್ದ. ಅತಿವೇಗದಲ್ಲಿ ಬೈಕ್ ಚಲಾಯಿಸಿ ನೇರವಾಗಿ ಬಸ್ ಗೆ ಹೋಗಿ ಗುದ್ದಿ ಜೀವ ಕಳೆದುಕೊಂಡ. ತಾಯಿ ಹೆಂಡತಿ ಮಗುವಿನ ಗತಿ ಆ ಪರಮಾತ್ಮನೇ ಬಲ್ಲ.

ಎಲ್ಲಾ ಅವನ ಲೀಲೆ. ಖೋಡೆ ವಿಜಯಮಲ್ಯರ ಸೃಷ್ಟಿಕರ್ತನೂ ಪರಮಾತ್ಮನೇ...! ಇವನ ಜೀವ ಕಸಿದುಕೊಂಡ ಪರಮಾತ್ಮನೂ ಅವನೇ  ಅಂದ ಮೇಲೆ ಹುಲುಮಾನವರಾದ ನಮ್ಮ ವರಾತ ಯಾರಿಗೆ ಬೇಕು. ಕುಡಿಯದಿದ್ದವರೂ ಸಾಯುತ್ತಾರೆ ಅವರೇನು ಶಾಶ್ವತರಾ? ಎಂದು ಕೇಳುವ ಜನರಿಗೆ ನಾವು ಅನ್ನುವುದೇನು?.