ನನ್ನ ಈ ಭಾವಕೇ ಹೆಸರು ನೀನಾದೆ ಬರಿದಾದ ಈ ದೇಹಕೆ ಉಸಿರನು ನೀ ತಂದೆ ನಿನ್ನ ಹೆಸರಿಟ್ಟು ಕೂಗುವ ಮುನ್ನ ಕೈಬಿಟ್ಟು ಹೋಗೆಂದೆ... ಕಾಣದ ಜೀವಕೇ ಕಣ್ಣುಗಳನು ನೀ ಕೊಟ್ಟೆ ಕನಸಿನ ಲೋಕದಲಿ ಮೈ ಮರೆಸಿ ಬಿಟ್ಟೇ ಅಂಗಳದ ಮನಸಿಗೆ ಬೆಲದಿಂಗಳವ ಕೊಟ್ಟೆ ಇನ್ಯಾಕೇ ನನ್ನನು ಒಬ್ಬನೇ ಮಾಡಿಬಿಟ್ಟೆ?? ಹಸಿಯಾದ ಹಣ್ಣಿಗೆ ರಸವನು ನೀ ತಂದೆ ಹಸಿವನು ಮರೆಸಿ ನೀನೇ ನನಗೆ ಉಸಿರೆಂದೆ ಹತ್ತು ಜನರೆದುರಲ್ಲಿ ನನ್ನನು ಕಣ್ಮುಚ್ಚಿ ತಬ್ಬಿಕೊಂಡೆ ಇನ್ಯಾಕೇ ನನ್ನನು ದೂರ ಮಾಡಿಕೊಂಡೆ???