ಈ  ಇಳೆಯಲ್ಲಿ .....

  ಅರಳಿರುವ ಹೂವುಗಳ

  ಹಾರುವ ಚಿಟ್ಟೆಗಳ

  ಝೇಂಕರಿಸುವ ದುಂಬಿಗಳ

  ಹಾಡುವ ಹಕ್ಕಿಗಳ

  ಲೆಕ್ಕ  ಇಟ್ಟವರು ಯಾರು ?

 

  ಸೃಷ್ಟಿಕರ್ತನಿಗೆ ಗೊತ್ತು !

  ಅವುಗಳ ಜನನ ಮರಣದ ಲೆಕ್ಕ

  ನಾವು ಕಂಡಷ್ಟೆ ....ನಮಗೆ  ಪಕ್ಕಾ !

 

  ನಮಗೆ ನಮ್ಮ ಲೆಕ್ಕವೆ ಸರಿ

  ಸಂಬಳ,ಗಿಂಬಳದ ಲೆಕ್ಕ

  ಕೊಟ್ಟವನಿಗಿಂತ ಕೊಡುವವನ ಲೆಕ್ಕ

  ಉಳಿಸಿದ್ದು,ಅಳಿಸಿದ್ದು, ಗಳಿಸಿದ್ದು

  ನಮಗೆ ಪಂಚಪ್ರಾಣ !

  ಸಂಕಲನ,ವ್ಯವಕಲನ  ಲೆಕ್ಕ ಆಚಾರಗಳ ಮಧ್ಯೆ

  ದಿನ ಅರಳಿ ..ಅಂತ್ಯವಾಗುತ್ತಲೇ  ಇದೆ !

 

  ಆದರೆ ನಮ್ಮ ಜೀವಿಸುವ ಲೆಕ್ಕ

  ಮಾತ್ರ ನಮಗೆ ಗೊತ್ತಿಲ್ಲ !

  ಪರಮಾತ್ಮನೊಬ್ಬನೇ  ಬಲ್ಲ .