ಸಂಬಂಧಗಳಿಗಿಂತ ನಿಜಕ್ಕೂ ಸ್ನೇಹಬಂಧಗಳೇ ಶ್ರೇಷ್ಠ
ತೊರೆಯಬಹುದು ಸಂಬಂಧಿಗಳನು, ಸ್ನೇಹಿತರನ್ನು ಕಷ್ಟ
ರಕ್ತ ಸಂಬಂಧವೇ ಶಾಶ್ವತ ಅನ್ನುವ ಮಾತು ನನಗೆ ಅಪಥ್ಯ
ಸ್ನೇಹಿತರೇ ಒಂದು ಕೈ ಮೇಲು ಅನ್ನುವುದು ನಿಜವಾಗಿ ಸತ್ಯ
ಸಂಬಂಧಗಳು ಕೂಡಿದಂತೆಲ್ಲಾ ಕಳಕೊಂಡೂ ಬಂದವಲ್ಲಾ?
ಸ್ನೇಹಿತರು ಕೂಡಿಕೊಂಡದ್ದೇ ಜಾಸ್ತಿ ಕಳೆದುಕೊಂಡದ್ದಷ್ಟಿಲ್ಲ
ಸಂಬಂಧಿಗಳ ನಡುವೆ ಸಂಪರ್ಕ ವಿರಳವಾದರೆ ಅದು ಕಷ್ಟ
ಸ್ನೇಹಿತರು ಅದೆಷ್ಟೇ ದೂರ ಇದ್ದರೂ ಅವರು ಮನಕೆ ಇಷ್ಟ
ಹೆತ್ತವರನ್ನೂ ಆಶ್ರಮಕ್ಕೆ ಅಟ್ಟುವ ಮಕ್ಕಳಿದ್ದಾರೆ ಈ ನಾಡಿನಲ್ಲಿ
ಒಳ್ಳೆಯ ಸ್ನೇಹಿತರನು ಕೈಬಿಡುವವರು ಯಾರಿದ್ದಾರೆ ಹೇಳಿ ಇಲ್ಲಿ
*****************************
ಆತ್ರಾಡಿ ಸುರೇಶ ಹೆಗ್ಡೆ
ಪ್ರತಿಕ್ರಿಯೆ (6)