ಪಕ್ಕದ ಚಿತ್ರ ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಯ ಅಂಗಡಿ ಮುಂಗಟ್ಟಿನಲ್ಲಿ ತೆಗೆದವುಗಳು. ಕೊಪ್ಪಳಕ್ಕೆ ಹೋದಾಗ ಅನೇಕ ಚಿತ್ರಗಳನ್ನು ತೆಗೆದಿದ್ದರೂ, ಪ್ರಸ್ತುತ
ಬೆಳಗಾವಿ ಪ್ರದೇಶ ಯಾರಿಗೆ ಸೇರಿದ್ದೆಂಬುದ
ರ ಬಗ್ಗೆ ಮತ್ತೆ ಎದ್ದ ಗದ್ದಲದ ಸಂದರ್ಭದಲ್ಲಿ ಇವುಗಳನ್ನು ಹಂಚಿಕೊಳ್ಳುವುದು ಸೂಕ್ತ ಎಂದೆನಿಸಿ ಸಂಪದದಲ್ಲಿ
ಹಾಕುತ್ತಿದ್ದೇನೆ.
ಇಲ್ಲಿನ ಜನ ಸಾಮಾನ್ಯರ ದೇಶ ಭಕ್ತಿಯ ಬಗ್ಗೆಯಾಗಲೀ, ಕನ್ನಡ ನಾಡು ನುಡಿಯ ಬಗ್ಗೆಯಾಗಲಿ ಯಾರೂ ಪ್ರಶ್ನೆ ಮಾಡುವಂತೆಯೇ ಇಲ್ಲ. ಪ್ರತಿಯೊಂದು
ಮನೆಯ ಅಕ್ಷರಸ್ತರು ಕನಿಷ್ಟ ಒಂದಾದರೂ ಕವನ/ಕಥೆ/ ತ್ರಿಪದಿ ಹೀಗೆ ಕನ್ನಡ ಸಾಹಿತ್ಯದ ಒಂದಾದರೂ ಪುಸ್ತಕವನ್ನು ಹೊರತಂದಿರುತ್ತಾರೆ. ಅಥವಾ ಸಂಕಲನ
ಮಾಡಿಯಾದರೂ ಮುದ್ರಿಸಿರುತ್ತಾರೆ. ಅಲ್ಲದೇ ಇಲ್ಲಿಯ ಪ್ರತಿಯೊಬ್ಬರ ಮನೆಗೆ ಹೋದಾಗಲೂ ಕನ್ನಡದ ಒಂದಾದರೂ ಪುಸ್ತಕವನ್ನು ಪ್ರೀತಿ ಪೂರ್ವಕ ಕೊಟ್ಟು

ಸತ್ಕರಿಸುವುದನ್ನು ನೋಡುತ್ತೇವೆ. ಹೀಗೆ ನಾನು ಹೋದ ಕೆಲವೇ ಮನೆಗಳಿಂದ ಹತ್ತಾರು ಪುಸ್ತಕವನ್ನು ತಂದಿದ್ದೇನೆ. ಓದಿದ್ದೇನೆ. (ಇದನ್ನು ಉತ್ತರ ಕರ್ನಾಟಕ
ಭಾಗದಲ್ಲಿ ಬಿಟ್ಟರೆ ಇತರ ಭಾಗಗಳಲ್ಲಿ ಕಾಣುವುದು ವಿರಳವೇ ಸರಿ)
ಇದಕ್ಕೆ ಪುಷ್ಟಿ ನೀಡುವಂತೆ "ಮಾ ತುಜೆ ಸಲಾಂ", "ಓದು ಕನ್ನಡ, ಕಲಿ ಕನ್ನಡ, ಬರೆ ಕನ್ನಡ" ಹೀಗೆ ಹತ್ತಾರು ಫಲಕಗಳನ್ನು ಜಾತ್ರೆಯ ಮಿಠಾಯಿ 
ಅಂಗಡಿಯಲ್ಲಿ ಕಾಣಬಹುದು. ಹಾಗೆಯೇ ನಾಡಿನ ವೈಶಿಷ್ಟಯಗಳನ್ನು ಬಿಂಬಿಸುವ ಅನೇಕ ದೃಶ್ಯವನ್ನೂ ಕಾಣಬಹುದು.
ಇವರ ಗಂಡು ಭಾಷೆ, ನಡೆ ನುಡಿಗಳು ಹೊರ ನೋಟಕ್ಕೆ ಗಡಸು, ವರಟಾಗಿ ಕಂಡರೂ, ಇವರ ಪ್ರೀತಿಯ ಸ್ವಲ್ಪವೂ ನಾಟಕೀಯತೆಯನ್ನು ಕಾಣದ ಮನಸಾ
ನೀಡುವ ಆದರಾತಿಥ್ಯವೂ ಅನನ್ಯವೇ ಸರಿ
ಹಾಗೆಯೇ ಇವರ ಬೇಡಿಕೆಗಳೂ ಸಹ ಜನ ಸಾಮಾನ್ಯರ ಬೇಡಿಕೆಯಾಗಿದ್ದು ಇದು ಜನರಲ್ಲಿ ಮೂಡಲು ಕಾರಣ ಹುಡುಕುವಷ್ಟು ನನಗೆ ಸಮಯ - ಪ್ರಜ್ಞೆ
ಸಾಲದಾಯಿತೆಂದೆ ಹೇಳಬೇಕು. ಅಲ್ಲಿಂದ ಊರಿ ಬಂದ ನಂತರ ಈ ಪ್ರಶ್ನೆಗಳು ಕಾಡಲಾರಂಭಿಸಿತು ಅಷ್ಟೆ. ಅಂತಹ ಬೇಡಿಕೆಗಳ ಒಂದು ಸ್ಯಾಂಪಲ್ ಸಹ
ಒಂದು ಫೋಟೋದಲ್ಲಿದೆ ನೋಡಬಹುದು.
ಒಂದು ಮಿಠಾಯಿ ಅಂಗಡಿಯಲ್ಲಿ "ಹೈದರಾಬಾದ್ ಕರ್ನಾಟಕಕ್ಕೆ ಪ್ರಾದೇಶಿಕ ಸ್ಥಾನ ನೀಡಲೇ ಬೇಕು" ಎಂಬ ಫಲಕವನ್ನು ಕಾಣಬಹುದು. ಮಿಠಾಯಿ ಮಾರುವ
ಅಂಗಡಿವನ ಕೂಗೆಂದು ಇದನ್ನು ನಿರ್ಲಕ್ಷಿಸುವಂತಿಲ್ಲ. ಮುಂದೊಂದುದಿನ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗು ಭುಗಿಲೇಳುವ ಮುನ್ನವೆ ಈ ಬಗ್ಗೆ ಎಚ್ಚೆತ್ತುಕೊಂಡು,
ದಮನಕ್ಕಿಂತ ತಡೆಗಟ್ಟುವುದು ಸೂಕ್ತ ವೆಂದು ಪರಿಗಣಿಸಿ, ಹಾಗಾದರೆ ಏಕೆ ಹೀಗೆ, ಪರಿಹಾರ ವೇನು ಎಂಬಿತ್ಯಾದಿಗಳನ್ನು ಹುಡುಕಿಕೊಳ್ಳುವುದು ಸೂಕ್ತವಲ್ಲವೇ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!