೧)
ಮನೆಯಲ್ಲಿದ್ದಾಗ ಅಮ್ಮನ ಕೈ ಅಡುಗೆ ,
ಹರಿವೆ ಬಸಳೆ ಅಲಸಂಡೆ !
ಬೆಂಗಳೂರು ಸೇರಿ ಹೆಂಡತಿ ಕೈ 'ಅಡಿಗೆ'
ಈಗ ಗರುಡ,ಫೋರಮ್ ,ಬರಿಸ್ತಾ ಆಲ್ ಸಂಡೆ !!
೨)
ಮೇಸ್ಟ್ರು ಹೇಳಿದ್ರು ,
ಕಾವ್ಯ ಕೃಷಿ ಮಾಡಿ
ಗುಂಡ ಕಣ್ಸನ್ನೆ ಮಾಡಿದ
ಕಾವ್ಯ , ಕೃಷಿ ಕಷ್ಟ ಕಣೆ !
೩)
ಹಿಂದೆ ,
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ !
ಈಗ ,
ಹೆಂಡತಿಯೊಬ್ಬಳು 'ಮನೆಯೊಳಗೇ' ಇದ್ದರೆ
ನನಗದು ಕೋಟಿ ಕೋಟಿ ರುಪಾಯಿ !!
೪)
ಹಿಂದೆ ಕೂಡು ಕುಟುಂಬ , ಮನಸು ದೊಡ್ಡದು
ತಾತ , ಅಪ್ಪ ಮಗ ಮೊಮ್ಮಗ ಒಂದೇ ಮನೆಯಲ್ಲಿ
ಇಂದು ಜಗತ್ತು ಚಿಕ್ಕದು, ಜೊತೆಗೆ ಮನಸ್ಸು ಕೂಡ
ಅಪ್ಪ ಆಫೀಸು , ಅಮ್ಮ ಫೆಮಿನಿಸ್ಟು, ಮಗಳು ಕಾನ್ವೆಂಟು ,ತಾತ ಒಬ್ಬನೇ ಮನೆಯಲ್ಲಿ !
(ಆಫೀಸ್ ಮದ್ಯಾನ್ಹ ದ ನಿದ್ದೆಯ ಹೊತ್ತಲ್ಲಿ ಬರೆಯುವ ಮನಸ್ಸಾಯ್ತು ಇನ್ದ್ಯಾಕೋ ! )
ಪ್ರತಿಕ್ರಿಯೆ (6)