ಕನಸು-ನನಸು  

ಅ೦ದು ನಾ ಕಂಡ ಕನಸು ಎಸ್ಟೊಂದು ಸೊಗಸಿತ್ತು.
ಕನಸು ನನಸಾಗದಿದ್ದರೆ ಇನ್ನೂ ಚೆಂದಿತ್ತು.

 

ಪುಟ್ಟ ಹೃದಯದಲಿ ದೊಡ್ಡವರೆಡೆಗೆ೦ತದೋ ಬೆರಗು,
ಕಂಗಳಲಿ ನಾ ದೊಡ್ಡವನಾಗುವ ಕನಸು,
ಸೈಕಲ್ಗೆ ಕಾಲು ಸಿಗದಿದ್ದರೂ,
ಬೈಕನೇರಿ ಊರಲೆಯುವ ಕನಸು.

 

ದೊಡ್ದ್ದವರಿಗಿಲ್ಲಾ ಶಾಲೆ, ಪಾಠ, ಮನೆಗೆಲಸದ ಗೋಳು.
ದೊಡ್ದವರದೋ,
ಮೇಸ್ಟ್ರು-ಪರೀಕ್ಷೆ , ಪಾಸು-ಫೇಲಿನ ಭಯವಿಲ್ಲದ ಬಾಳು.

 

ನನಸಾಗಿದೆ ಕನಸು, ನಾನಿಂದು ದೊಡ್ಡವನು.
ಬೈಕೇನು, ಕಾರೂ ಕೊಡದು,
ಕಾಲು ಸಿಗದ ಸೈಕಲ್ಲಿನ ಮಜಾ.
ಕನಸು ಕಂಡದ್ದಕೇನು ಈ ಸಜಾ.

 

ಮೇನೆಜರನ ಕೊಂಕಿಗಿಂತ,
ಮೇಸ್ಟರ ಬೆತ್ತವೆಸ್ಟೋ ಮೇಲು.
ಆದರೇನು, ಕನಸಿನಲು ಹಿಂದಕ್ಕೋಡದು ಬಾಳು.

 

ಎಲ್ಲೋ ಓದಿದ ನೆನಪು,
"ಒಡೆದ ಹೃದಯಕ್ಕಿಂತ ಮುರಿದ ಆಟಿಕೆಗಳೆಸ್ಟೋ ಮೇಲು"
ಅಹುದೆನ್ನಲು ಯೋಚಿಸಬೇಕಿಲ್ಲ,
ಸಾಕ್ಷಿಗಿದೆ ನನ್ನದೇ ಬಾಳು.

 

ಇಂದು ಮತ್ತೆ ಮಗುವಾಗುವ ಕನಸು,
ಈ ಕನಸು ನನಸಾಗದಿರೇನು...?
ನನಸಾದ ಕನಸಿಂದ ದೊರಕಿದಾದರು ಏನು...?

 

ಹುಟ್ಟು ಸಾವಿನ ನಡುವೆ ಜೀವನವೇ  ಕನಸು
ಈ ಕನಸು ಮುಗಿಯದೆಯೇ, ವಿರಮಿಸದು
ಕನಸು ಕಾಣುವ ಮನಸು.