"ಜಮಾನೇ ಕೋ ದಿಖಾನಾ ಹೈ" ಹಿಂದಿ ಚಲನಚಿತ್ರಕ್ಕಾಗಿ  ಮಜ್ರೂಹ್ ಸುಲ್ತಾನ್‍ಪುರಿ ರಚಿಸಿರುವ, ಶೈಲೇಂದ್ರ ಸಿಂಗ್ ಹಾಡಿರುವ, ರಾಹುಲ್ ದೇವ್ ಬರ್ಮನ್ ಸಂಗೀತ ನೀಡಿರುವ,

ಒಂದು ಗೀತೆಯ ನೆನಪಿನಲ್ಲಿ:

 

ನಿನ್ನ ಬಿಟ್ರೆ ನಂಗಿನ್ಯಾರು
ನೀನೇ ನನ್ನ ಪಾಲಿನ ದೇವ್ರು
ಕೇಳೇ ಸಖಿ ನೀ

ದೊಡ್ಡ ಬಂಗಲೆಯಲ್ಲೋ
ಮುರುಕು ಗುಡಿಸಲಿನಲ್ಲೋ
ಎಲ್ಲಿದ್ರೂನು ನಂಗೆ ಇಷ್ಟ ನೀ

ನನ್ನ ಮನವ ಗೆದ್ದವರ್ಯಾರು
ನೀನೇ ನನ್ನ ಪಾಲಿನ ದೇವ್ರು
ಕೇಳೇ ಸಖಿ ನೀ

ನನ್ನೀ ಕಣ್‍ಗಳ ನೋಡು
ಅಲ್ಲಿ ಒಳಗಿರೋ ಬಿಂಬವ ನೋಡು
ಬೇಡ್ತಿದೀನಿ ಒಮ್ಮೆ ನೋಡು ನೀ

ನೀನೇ ನನ್ನ ಜೀವದ ಉಸಿರು
ನೀನೇ ನನ್ನ ಪಾಲಿನ ದೇವ್ರು
ಕೇಳೇ ಸಖಿ ನೀ

ಹೋಗಂತೀಯಾ ನೀನು
ಹೋಗೋದೆಲ್ಲಿಗೆ ನಾನು
ಸರ್ವಸ್ವ ಅಲ್ವೇನೇ ನಂಗೆ ನೀ

ನೀನೇ ನನ್ನ ಇಹವೂ ಪರವೂ
ನೀನೇ ನನ್ನ ಪಾಲಿನ ದೇವ್ರು
ಕೇಳೇ ಸಖಿ ನೀ

ನಿನ್ನ ಬಿಟ್ರೆ ನಂಗಿನ್ಯಾರು
ನೀನೇ ನನ್ನ ಪಾಲಿನ ದೇವ್ರು
ಕೇಳೇ ಸಖಿ ನೀ
*********
ಆತ್ರಾಡಿ ಸುರ‍ೇಶ ಹೆಗ್ಡೆ