ಸಖೀ,

ನಿನ್ನ ನಡೆ
ನನ್ನೀ ಮನಕೆ
ಮೋಹಕವೆನಿಸಿತ್ತು
ಲತೆಯಂತೆ,

ನಿನ್ನ ಕುಡಿನೋಟದ
ಮುಗುಳ್ನಗುವೆನ್ನ
ಘಾಸಿಮಾಡಿತಂದು
ಬಾಣದಂತೆ,

ನಿನ್ನ ಸವಿನುಡಿಗಳು
ನನ್ನ ಕಿವಿಗಳಿಗೆ
ಕೇಳಿಬಂದವಂದು
ಕೋಗಿಲೆ ಗಾನದಂತೆ,

ಜಾಗೃತನಾಗಿದ್ದೆ
ನಾನು ನಿನ್ನ
ಪ್ರೀತಿಯಲೆಂದೂ
ಬೀಳದಂತೆ,

ಬಿದ್ದಾಯ್ತು
ಇನ್ನು ಬಿಡುಗಡೆಯಿಲ್ಲ,
ನಾ ಬಂಧಿ, ನೀನು ಇರುವೆಯಿಂದು
ಮರವನಪ್ಪಿದ ಬಲಿಷ್ಟ ಬೀಳಿನಂತೆ!
**********
ಆತ್ರಾಡಿ ಸುರೇಶ ಹೆಗ್ಡೆ