ಸದ್ದು ಗದ್ದಲ ಬೇಡ ಬರೀ ದೀಪಗಳ ಬೆಳಕಿರಲಿ
ಮಾತು ಮಾತಿನಲೂ ಪ್ರೀತಿಯಾ ಸೆಲೆಯಿರಲಿ
ಪಟಾಕಿ ಸುಡುಮದ್ದುಗಳಿಗೆ ಬೇಡ ಬೇಡಾ ಅನ್ನಿ
ವಾಯು-ಶಬ್ದ ಮಾಲಿನ್ಯಕ್ಕೆಮ್ಮ ಅಸಹಕಾರ ಅನ್ನಿ
ಅಲ್ಲಿ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರ ಗೋಳು
ಇಲ್ಲಿ ಸದ್ದುಗದ್ದಲದಿಂದೀ ಕಿವಿಗಳಾಗುತ್ತವೆ ಹಾಳು
ಇದರಲ್ಲಿ ಗುಣಾತ್ಮಕ ವಿಷಯಗಳೇ ಇಲ್ಲವಿದು ಸತ್ಯ
ಅವುಗಳಿಂದ ಆಗುವ ನಷ್ಟಗಳ ಮಾತು ಅಲ್ಲ ಮಿಥ್ಯ
ನಮ್ಮ ಮನೆಯಲ್ಲಿ ದೀಪಾವಳಿಗೆ ಬರೀ ದೀಪಗಳೇ
ಪಟಾಕಿ ಬೇಡ ಅನ್ನಲು ಬೆಂಬಲಿಸುವಳೆಮ್ಮ ಮಗಳೇ
ಒಂದು ದೀಪದಿಂದ ಇನ್ನೊಂದು ದೀಪವನು ಹಚ್ಚಿದರೆ
ನೋಡಿ ಬೆಳಕಿನಿಂದ ಹೇಗೆ ಝಗಮಗಿಸುವುದು ಈ ಧರೆ
ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಪ್ರೀತಿ
ಹರಿಯುತಿರೆ ಜಗದಲ್ಲೆಲ್ಲೂ ಸ್ಥಾಪನೆಯಾದೀತು ಶಾಂತಿ!
*********************
ಎಲ್ಲಾ ಓದುಗರಿಗೂ ದೀಪಾವಳಿ ಹಬ್ಬ ಹಾರ್ದಿಕ ಹಾರೈಕೆಗಳು!
ಪ್ರತಿಕ್ರಿಯೆ (2)