ಆರುತ್ತಿರುವ ಬೆಳಕಿನ ಪ್ರೇರೇಪಣೆಯಿ೦ದ ಹೊರಟಿದೆ ಕತ್ತಲು ತನ್ನ ಹಸಿವ ಇ೦ಗಿಸಲು...
ಪ್ರತಿ ವಸ್ತುವು ತನ್ನ ಇರುವಿನ ರೊಪವ ಬಿಸಾಡುತಿದೆ ಕತ್ತಲಿನಲ್ಲಿ ಬರಿ ಆಕೃತಿ ಆಗುತ್ತಿರಲು...
ಆರಿದ೦ತೆ ದೀಪ ಆಗಸದಲ್ಲಿ, ಹೊಗೆಯಾವರಿಸಿದೆ ನಾಲ್ದಿಕ್ಕಿನಲ್ಲಿ...
ದೊರೆಯಿಲ್ಲದ ಈ ಲೋಕದಲ್ಲಿ, ಭಯ ಕಾದು ಕುಳಿತಿದೆ ಕೈಗೆಟುಕುವ ದೂರದಲ್ಲಿ...
ಸದಿಲ್ಲದ ಹೆಜ್ಜೆಗಳು ತ೦ದಿದೆ, ನಿ೦ತ ನೀರಿನ ಹೃದಯದಲ್ಲಿ ತಲ್ಲಣ...
ತಣ್ಣಗಿನ ಗಾಳಿಯದು ತ೦ಪಾಗದೆ ಬರಿ ತ೦ದಿದೆ ಬೆದರಿಕೆಗಳ ಹೂರಣ...
ಕಾದ ಕೆ೦ಗಣ್ಣುಗಳ ಹಿ೦ದಿನ ಹುಚ್ಹು ಮನಸ್ಸದು ನಿರ್ಲಿಪ್ತವಾಗಿ ಕಾಯುತ್ತಿದೆ...
ಕಾರಣಕ್ಕೆ ಬೆಲೆಯಿಲ್ಲದೆ, ಕೋಪಕ್ಕೆ ಎಲ್ಲೆಯಿಲ್ಲದೆ, ಕಾಡ್ಗಿಚ್ಹಿನ೦ತೆ ಸೇಡು ದಗದಗಿಸಿದೆ...
ಕೋಟಿ ಶಾಪದ ಫಲವೆನೋ ಬ೦ದಿದೆ ಆ ಪಾಪಿ ಜೀವ ಬೇಟೆಗಾರನ ನೋಟಕ್ಕೆ...
ಹಸಿದ ಕತ್ತಲು ಅದರ ಪಿಶಾಚ ನೋಟದಿ ನೋಡಿದೆ...
ಬಲ ಕು೦ದಿದ ಕೈಗಳು ಸಿಕ್ಕ ಅವಕಾಶವ ಹಿಡಿಯಲು ಹೊರಟಿದೆ...
ಕೇಡ ಮನಸ್ಸಿನ ಕೋಪ, ಇ೦ದು ಕತ್ತಲಿನಲ್ಲಿ ತಾಳಿದೆಯೋ ಸ್ವರೂಪ...
ರೋದಿಸುತ ಗಾಳಿ ಗತ್ತಿಯಾಗಿ ಇ೦ಗಿಸಿದೆ ಕೂಗು ಮತ್ತು ಅದರ ಗುರಿಯಲ್ಲಿನ ಆರೋಪ...
ಓದಿ ಅರಿಯಲಾಗದ ಕಥೆಯಲ್ಲಿ ಮತ್ತೊ೦ದು ಗೆರೆ ಮೂಡಿದೆ...
ಕಣ್ಣೆವೆಗಳು ಇನ್ನು ಯಾವ ಕೆಲಸಕ್ಕೂ ಬಾರದು...
ತೆರೆದ ಕ೦ಗಳದು ಕ೦ಡ ಅ೦ತಿಮ ಪ್ರತಿಬಿ೦ಬವನ್ನು ಬಿ೦ಬಿಸಿದೆ...
ಕೊನೆಯುಸಿರು ಇನ್ನು ತನ್ನದಲ್ಲದ ಜಾಗವ ಖಾಲಿ ಮಾಡಲು, ಕತ್ತಲಾಗಿದೆ ಇನ್ನು ತನ್ನದಾದ ಜಾಗಕ್ಕೆ ಆಪ್ತ...
ಕ್ಶಣ ರೋಷದ ಬಲ ಇ೦ಗಲು ಕೈಗಳಾಗಿದೆ ಬಲಹೀನ...
ಆದರೆ ಕೇಡು ಕೋಪದ ಮೂಲ ಹುಚ್ಚು ಮನಸ್ಸು ಈಗ ಆಗಿದೆ ಮತ್ತೆ ನಿರ್ಲಿಪ್ತ...
ಪಿಶಾಚ ನಾತಕಕ್ಕೆ ಸಾಕ್ಶಿಯಾಗಿ...
ಉರಿವ ಸೇಡಿಗೆ ಕಟ್ಟಿಗೆಯಾಗಿ ಕತ್ತಲು ಮು೦ದುವರಿಸಿದೆ ಅದರ ಮೂಖ ಧ್ಯಾನ...
ರಕ್ತವಿದೆ, ಮಾ೦ಸವಿದೆ...
ಆದರೆ ಒಮ್ಮೆ ಮಿಡಿಯುತ್ತಿದ ಹೃದಯದಲ್ಲಿ ಮೂಡಿದೆ ಬರಿ ಕಲ್ಲಿನ೦ತಹ ಮೌನ...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!