ಅದೊಂದು ಆಲದ ಮರ ,
ಹೊರಗಡೆ ಬಣ ಬಣ ಬಿಸಿಲು ,
ನನ್ನ ಪಕ್ಕದಲ್ಲಿ ಅಜ್ಜನಿದ್ದಾನೆ ,ಮುಖ ,ಬಟ್ಟೆ,ಮನ್ನಸ್ಸು ಮಾಸಿದೆ
ಘಮ್ಮನೆ ವಾಸನೆ ಆಲದ ಮರದಂತೆ
ಅನತಿ ದೊರದಲ್ಲಿ ತಾಯಿ ಮಗುವಿಗೆ ಹಾಲು ಉಣ್ಣಿಸುತ್ತಿದ್ದಾಳೆ,
ಕುರುಡಿ ಒಬ್ಬಳು ಹಾಡುತಿದಾಳೆ ಮರದ ಮೇಲಿನ ಕೋಗಿಲೆ ಜೊತೆಗೆ
ಮರದ ಹಿಂದೆ ದಂಪತಿಗಳಿಬ್ಬರು ಮಾತಾಡುತಿದ್ದಾರೆ
ಎಲೆ ಉದುರುತ್ತಿವೆ ,ಅಜ್ಜನನ್ನು ಕೇಳುತೇನೆ "ಯಾಕೆ ಎಲೆ ಉದುರುತ್ತವೆ ಟೊಂಗೆ ಜೊತೆ ?"
ಅಜ್ಜ ಮೊಕ, ತನ್ನ ನೆರೆದ ಕೊದಲು,ಸುಕ್ಕು ಗಟಿದ ಮೊಗವನ್ನು ಕೈ ಯಿಂದ ತೋರಿಸುತ ಆಗಸದತ್ತ ನಗುತ್ತಾನೆ ,
ಅರ್ಥವಾಗದೇ ಸುಮ್ಮನೆ ಕೂತೆ ಎಲ್ಲರು ಅವರವರ ವ್ಯವಹಾರದಲ್ಲಿದಾರೆ ,
ಮರ ಮಾತ್ರ ಸುಮ್ಮನೆ ನಿಂತಿದೆ ,ಕೊತಿದ್ದೇವೆ ನಾವು ಅದೇ ನೆರಳಲ್ಲಿ .