ರಾಜಕೀಯ 

   ಮತ್ತೆ ಮತ್ತೆ  ಕೇಳಬರುತ್ತಿದೆ ಗುಸು ಗುಸು ಸುದ್ದಿ
   ನಡವಳಿಕೆಯೂ ತೋರುತ್ತಿದೆ ಪಕ್ಷಪಾತದ ಬುದ್ದಿ
 
  ನನಗೂ ಬಡೆಯಿತು ಹೊಲಸು ರಾಜಕೀಯದ ವಾಸನೆ
  ಆಗಲೇ ಗೊತ್ತಾಯಿತು ರಾಜಕೀಯ ತೀರ ದುರ್ವಾಸನೆ
 
  ಸತ್ಯದ ಖಚಿತತೆಗೆ ಗಮನಿಸಿದೆ ಸ್ವಲ್ಪ ದಿನಗಳು ಹೀಗೆ
  ಪರೀಕ್ಷಿಸಿಯೂ ನೋಡಿದೆ ಸುದ್ದಿಯು ನಿಜವೋ ಹೇಗೆ
 
  ಪಕ್ಷಪಾತತೆ ಎದ್ದು ಕಾಣತೊಡಗಿತು ಬರಿಗಣ್ಣಿನ ಮುಂದೆ
  ತೆರೆಯೆ ಇಲ್ಲದೆ ನಡೆಯುತ್ತಿತ್ತು ನಾಟಕವು ನಮ್ಮ ಮುಂದೆ
 
  ಹತೋಟಿ ಇಲ್ಲದೆ ನಡೆಯುತ್ತಿದೆ ಕಳಪೆ  ರಾಜಕೀಯ
  ನಮ್ಮ ನೆಲದಲ್ಲೇ ಇಂದು ನಾವಾಗಿದ್ದೇವೆ ಪರಕೀಯ
 
  ಇಂಥಹ ವಾತಾವರಣ ನೀಡುವುದು ಅರೆ ಕ್ಷಣ ನಿರುತ್ಸಾಹ
  ಮುಂದಿನ ಕ್ಷಣವೇ ನೀಡುವುದು ಮುಂಬರಲು ಪ್ರೋತ್ಸಾಹ
 
  ತಲೆ ಓಡಿಸಿ ಮುಂಬರಲು ನೀಡುತ್ತಿರುವ ಸೂಚನೆಯೇನೋ
  ಇಂತಹ ಸಂಧರ್ಭಗಳು ಬರುವುದು ನಮ್ಮ ಒಳಿತಿಗೇನೋ?  
 
  - ತೇಜಸ್ವಿ .ಎ.ಸಿ