ಮೊದಲನೆ ಸಾಲಿನಲ್ಲೆ ಸ್ಪಷ್ಟಪಡಿಸುತ್ತಿದ್ದೇನೆ ವೇದದ ಬಗ್ಗೆ ನನಗೇನೂ ತಿಳಿದಿಲ್ಲ. ತಿಳಿಯುವ ಕುತೂಹಲವಿದೆ.

ವೇದದ ಮೂಲ ಸಿದ್ದಾಂತ

ಜ್ಞಾನ ಮತ್ತು ಅಹಿಂಸೆ, ಒಟ್ಟು

(ಜೀವಾತ್ಮ ಪರಮಾತ್ಮ

ಆತ್ಮ ಎಂದರೇನು?) ಇದರ ಬಗ್ಗೆ ನನಗಿರುವ ಸಂಶಯವನ್ನು ಪರಿಹರಿಸಕೊಳ್ಳಬೇಕಿದೆ. ಏಕೆಂದರೆ ಆತ್ಮದ ಅಸ್ತಿತ್ವದಲ್ಲಿ ನನಗೆ ನಂಬಿಕೆಯಿಲ್ಲ. ಆತ್ಮ ಎನ್ನುವುದೇ ಇಲ್ಲ ಎನ್ನುವುದು ನನ್ನ ಬಲವಾದ ಅಭಿಪ್ರಾಯ. ದೀಪ ಉರಿಯುತ್ತಿದೆ, ಎಣ್ಣೆ, ಬತ್ತಿ, ಮುಗಿದು ಹೋದಾಗ ಅಥವ ಹೊರಗಿನ ಗಾಳಿ(ಒತ್ತಡ) ಯಾವುದರಿಂದಾದರೂ ಅದು ಆರಿ ಹೋಗಬಹುದು.   

ಸ್ತ್ರೀಯರಿಗೆ ವೇದಾಧ್ಯಯನಕ್ಕೆ ಅವಕಾಶವಿಲ್ಲವೆ?

ಭಕ್ತಿ ಎಂದರೇನು?

ಪಂಚಭೂತಗಳ ಆರಾಧನೆ ಪ್ರಾರಂಭಕ್ಕೆ  ಕಾರಣವೇನಿರಬಹುದು?

ಕೊಡುವವನು ದೇವ. ಆದ್ದರಿಂದಲೇ ಶಂಚ ಮೇವಶ್ಚಮೆ ಪ್ರಿಯಂಚಮೆ ಕಾಮಶ್ಚಮೆ" ಎಂದು ಕೇಳಲ್ಪಟ್ಟಿತೆ?

ಪೂಜೆಯ ಅರ್ಥ

ಭಗವಂತನನ್ನು ಕಾಣುವ ಕಣ್ಣು, ಸೃಷ್ಠಿಕರ್ತನೆಂದು ಕರೆಯಬಾರದೇಕೆ?

ಸಾವಯವ ಕೃಷಿಯೂ ಒಂದು ಪೂಜೆ.

(ಕೆರೆಯ ಹೂಳೆತ್ತುವುದರಿಂದ ಸುತ್ತಮುತ್ತ ಇರುವ ಪ್ರದೇಶಗಳ ಬಾವಿಗಳಲ್ಲಿ ನೀರು ಉಳಿಯುತ್ತಿತ್ತು. ಪ್ರತಿ ವರ್ಷವೂ ಹೂಳೆತ್ತುವುದರಿಂದ ನೀರು ಭೂಮಿಯಲ್ಲಿ ಇಂಗುತ್ತದೆಯಲ್ಲವೆ? ಏಕೆಂದರೆ ಜೇಡಿ ಮಣ್ಣು ನೀರು ಭೂಮಿಯಲ್ಲಿ ಇಂಗುವುದನ್ನು ತಡೆಯುತ್ತದೆ. ಹೂಳೆತ್ತುವುದರಿಂದ ೨ ಪ್ರಯೋಜನ ಒಂದು ಕೃಷಿ ಜಮೀನು ಫಲವತ್ತಾಗುತ್ತೆ. ಕೆರೆಯನೀರು ಭೂಮಿಯಲ್ಲಿ ಇಂಗುತ್ತೆ. ಮತ್ತು ಕೆರೆಯಲ್ಲಿ ಹೆಚ್ಚು ನೀರು ಹಿಡಿಯುತ್ತದೆ.
ಪ್ರಕೃತಿ ರಕ್ಷಿತ ರಕ್ಷಿತಃ

ಬೆಳೆ ಬೇಳಿಬೇಕಾದ್ರೆ ಇರುತ್ತಿದ್ದ ಸತ್ವಯುತ ಭೂಮಿಯನ್ನು ಬಿಟ್ಟು ಬರೀ ನೀರನ್ನು ಮಾತ್ರ ಪ್ರಧಾನವಾಗಿ ಮಾಡಿಕೊಂಡಿದ್ದು ಒಂದು ಅನರ್ಥ) ಇದಿಷ್ಟು ನನ್ನ ಫಿಟ್ಟಿಂಗ್ ;)

ಮನೆಯಲ್ಲಿ ಅಗ್ನಿಹೋತ್ರ ಏಕೆ ಮಾಡ್ಬೇಕು? ಭೂಪಾಲ್ ದುರಂತದಲ್ಲಿ ಅಗ್ನಿಹೋತ್ರ ಮಾಡ್ತಿದ್ದವರು ಬಚಾವ್ ಆದ್ರಂತೆ, ಗೊತ್ತಿಲ್ಲ ತಿಳಿಯಬೇಕಿದೆ.

ಆರ್ಯರು ಯಾರು? ಆರ್ಯ ಎಂದರೆ ಯಾರು?

ಅತಿಥಿ ಸತ್ಕಾರ, ಅತಿಥಿಯ ಕರ್ತವ್ಯ, ಕಾವಿಧಾರಿ ಸನ್ಯಾಸಿಗಳಿಗೇನ್ ಕೆಲ್ಸ? ಅವರ ಅವಶ್ಯಕತೆ ಸಮಾಜಕ್ಕಿದೆಯೆ? ಅವರ ಕರ್ತವ್ಯವೇನು?

ವೇದ ಸಮಾಜ ಏಕೆ ಸುಭಿಕ್ಷವಾಗಿತ್ತು?


ಹಣಕ್ಕೆ ಏಕೆ ದ್ರವ, ದ್ರವ್ಯ ಎಂದು ಕರೆಯಲಾಗುತ್ತೆ.

ಬಲಿವೈಶ್ವಯಜ್ಞ ಎಂದರೆ ಸಂಪತ್ತು ಹಂಚಿಕೆ

ಮಾಂಸ ತಿನ್ನುವವರು ಪಿಶಾಚಿಗಳ? ;)

ದಾನ ಎಂದರೇನು?
ಚಾತುರ್ವಣ ಎಂದರೇನು? ಅದು ಅನಿವಾರ್ಯವೆ? ಅದು ಸಹಜ ವಿಭಾಗವೆ?

ಜನ್ಮತಃ ಬರುವುದು ಜಾತಿ. ವರ್ಣ ಅರ್ಹತೆಯಿಂದ ಪಡೆದುಕೊಳ್ಳುವುದು.

ಅಜ್ಞಾನ ಅನ್ಯಾಯ ಅಭಾವ ಆಲಸ್ಯ ಸಮಾಜದ ದುಷ್ಟಶಕ್ತಿಗಳು ಏಕೆ?

ಚಾತುರ್ವರ್ಣದ ಕರ್ತವ್ಯ.

ಮೇಲು ಕೀಳು ಎಂಬುದನ್ನು ವೇದ ಹೇಳುತ್ತದೆಯಲ್ಲವೆ?

ಸಮಾನತೆಯೊ? ಸಹಬಾಳ್ವೆಯೊ?

ಸಮಾಜ ಸ್ವರ್ಗವಾಗುವುದು ಸಾಧ್ಯವೆ?

ವಿಷ್ಣು ಶಬ್ದದ ಅರ್ಥ.

ಪ್ರಪಂಚಕ್ಕೆ ವೇದದ ಬಗೆಗೆ ಇರುವ ತಪ್ಪು ತಿಳುವಳಿಕೆ ಹೇಗೆ ಹೋಗಲಾಡಿಸಬಹುದು.

ಪುರಾಣಗಳಿಂದ ವೇದದ ನಾಶ. ಪುರಾಣಗಳ ವಿರೋಧಾಭಾಸದಿಂದ ವೇದಕ್ಕೆ ಮೋಸ.

ಹೀಗೆ ಇನ್ನೂ ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ___LINK_OPEN_href="http://vedasudhe.blogspot.com/2010/11/blog-post_30.html"___ಪ್ರವಚನವೊಂದಿದೆ

___LINK_OPEN_href="http://vedasudhe.blogspot.com/2010/11/blog-post_30.html"___http://vedasudhe.blogspot.com/2010/11/blog-post_30.html.  

ಸಹನೆಯಿಂದ ಸುಮಾರು ೪ ಗಂಟೆಗಳ ಈ ಮಾತುಗಳನ್ನು ಕೇಳಿ. ಸಂಶಯಗಳು ನನಗೂ ಇವೆ, ಜನವರಿ ೩೦ ರ ವಾರ್ಷಿಕೋತ್ಸವದಲ್ಲಿ ಸಮಸ್ಯೆ ಪರಿಹರಿಸಿಕೊಳ್ಳೋಣ ಬನ್ನಿ.