ಗೆಳೆತನ
ಎರಡು ಹೃದಯಗಳ ಮಧುರ ಸಮ್ಮಿಲನ
ಮಧುರ ಹೃದಯಿಗಳಿಗಿದು ತಾಣ
ಸುಂದರ ಬಂಧುರ ಪ್ರೀತಿಗೆ ಆಗರ 
ಸದಾ ಕೊಡುವುದಾನಂದದೌತಣ
ಸಿಹಿಯಾದ ರುಚಿಯು ಇದರಲ್ಲಿ ಇಹುದು 
ಕಹಿಯ ಮಾತಿಲ್ಲದಿಹುದು
ಮಹಿಮಾನ್ವಿತದ ಸುಕೃತದಿಂದಲಿ
ಗಹನವಿದು ನಮಗೆ ದೊರಕಿಹುದು
ನಶ್ವರವು ದೇಹ ನಶ್ವರವು ಗೇಹ
ನಶ್ವರವು ಸಕಲ ದಾಹ
ಗೆಳೆತನದ ಸೊಬಗು ಕೊಡುತಿಹುದು ಮೆರಗು
ಅದ ತ್ಯಜಿಸೆ ದೇಹ ದರಗು
ಚೇತನಕೆ ಕಾಂತಿ ಜೀವನಕೆ ಶಾಂತಿ
ಹೃದಯದಲಿ ವೀಣೆ ತ೦ತಿ
ಮಿಡಿದಿರುವ ರೀತಿ ನಿರ್ಮಲವು ಪ್ರೀತಿ 
ಆ ಸ್ನೇಹವೊಂದೆ ಗೆಳತಿ
                   = ನಾಗರತ್ನಾ ವಿ ಜೋಶಿ
                    ಹರಿಕೀರ್ತನ ಕಲಾವಿದೆ
                    ಹುಬ್ಬಳಿ
 

 

         ಎರಡು ಹೃದಯಗಳ ಮಧುರ ಸಮ್ಮಿಲನ

         ಮಧುರ ಹೃದಯಿಗಳಿಗಿದು ತಾಣ

         ಸುಂದರ ಬಂಧುರ ಪ್ರೀತಿಗೆ ಆಗರ

         ಸದಾ ಕೊಡುವುದಾನಂದದೌತಣ


          ಸಿಹಿಯಾದ ರುಚಿಯು ಇದರಲ್ಲಿ ಇಹುದು

          ಕಹಿಯ ಮಾತಿಲ್ಲದಿಹುದು

          ಮಹಿಮಾನ್ವಿತದ ಸುಕೃತದಿಂದಲಿ

          ಗಹನವಿದು ನಮಗೆ ದೊರಕಿಹುದು


           ನಶ್ವರವು ದೇಹ ನಶ್ವರವು ಗೇಹ

           ನಶ್ವರವು ಸಕಲ ದಾಹ

           ಗೆಳೆತನದ ಸೊಬಗು ಕೊಡುತಿಹುದು ಮೆರಗು

           ಅದ ತ್ಯಜಿಸೆ ದೇಹ ದರಗು


           ಚೇತನಕೆ ಕಾಂತಿ ಜೀವನಕೆ ಶಾಂತಿ

           ಹೃದಯದಲಿ ವೀಣೆ ತ೦ತಿ

           ಮಿಡಿದಿರುವ ರೀತಿ ನಿರ್ಮಲವು ಪ್ರೀತಿ

           ಆ ಸ್ನೇಹವೊಂದೆ ಗೆಳತಿ


                          - ನಾಗರತ್ನಾ ವಿ ಜೋಶಿ

                            ಹರಿಕೀರ್ತನ ಕಲಾವಿದೆ                  

                            ಹುಬ್ಬಳಿ