ಸಂಕ್ರಾಂತಿ
ಬಂದಿದೆ ಸಂಕ್ರಾಂತಿ
ತಿಂದು ಎಳ್ಳು ಬೆಲ್ಲವ
ಒಳ್ಳೆಯ ಮಾತಾಡುತ
ಸ್ನೇಹ ಬೆಳೆಯಲಿ
ಸಂಸ್ಕೃತಿಯ ಬೇರಿನಲಿ
ಸಂವೃದ್ಧಿಯು ಚಿಗುರಲಿ
ನಗುವು ಹರಡಲಿ
ಮನದ ಅಂಗಳದಿ
ಚೈತನ್ಯ ಮೆರೆಯಲಿ
ಎಲ್ಲರ ಮೊಗದಲಿ
ಮನೆಯು ತುಂಬಲಿ
ದವಸ ಧಾನ್ಯದಿ
ನೆಮ್ಮದಿಯು ನೆಲೆಸಲಿ
ರೈತಾಪಿ ಜನರಲಿ
ಸಿಂಗಾರಗೊಳ್ಳಲಿ
ದನಕರುಗಳು
ತಿಳಿವಿನ ಅರಿವು
ಎಲ್ಲೆಡೆ ಹರಡಲಿ
ಸಂಭ್ರಮವಿರಲಿ
ಸಂಪದಿಗರಲಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!