ಹನಿಗಳು
೧ ಬೆಳಕನು ಬೀರುತ ರಂಗನು ಹರಡುತ ಮೂಡಣದಿ ದಿನಕರನ ಮೆರವಣಿಗೆ ! ಮೊಗ್ಗುಗಳ ಮೊಗದಲಿ ಹಕ್ಕಿಗಳ ಉಲಿಯಲಿ ಮುಂಜಾವಿನ ಚಂದದ ಬರವಣಿಗೆ ! ೨ ಆಲಿಕಲ್ಲು ಸಹಿತ ಶುರು ಗಾಳಿ ಮಳೆ ಮುಂಬಾಗಿಲಿಗೆ ಬಂದ ನಾನು ಸೂಜಿಕಲ್ಲು ೩ ಬೆರಳುಗಳು ಅರಳಿಸುತಿವೆ ಅಂಗಳದಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Premashri
೧ ಬೆಳಕನು ಬೀರುತ ರಂಗನು ಹರಡುತ ಮೂಡಣದಿ ದಿನಕರನ ಮೆರವಣಿಗೆ ! ಮೊಗ್ಗುಗಳ ಮೊಗದಲಿ ಹಕ್ಕಿಗಳ ಉಲಿಯಲಿ ಮುಂಜಾವಿನ ಚಂದದ ಬರವಣಿಗೆ ! ೨ ಆಲಿಕಲ್ಲು ಸಹಿತ ಶುರು ಗಾಳಿ ಮಳೆ ಮುಂಬಾಗಿಲಿಗೆ ಬಂದ ನಾನು ಸೂಜಿಕಲ್ಲು ೩ ಬೆರಳುಗಳು ಅರಳಿಸುತಿವೆ ಅಂಗಳದಲ್ಲಿ...
ಆಕಾಶ ಮಲ್ಲಿಗೆಯೇ ‘ಏನೇ ಆಗಲಿ ಕಣ್ಣೀರು ಹಾಕಲಾರೆ ’ ನಿನ್ನೆ ನಾ ಕೊಟ್ಟ ಮಾತನು ಇಂದೇ ಮುರಿಯುವಂತೆ ಮಾಡಿದಳಲ್ಲ ಮಳ್ಳಿ ಅದೇ ಈ ಈರುಳ್ಳಿ !
ಭಾಗ್ಯವೊಂದು ಕೈತಪ್ಪಿ ಹೋದರೇನಾಯ್ತು ? ತೆರೆದು ಸಾಗು ನೀ ಬಳಿಯ ಬಾಗಿಲನು ಅಂದು ಕೊಂಡದ್ದು ನೀನು ಕದ ಹಾಕಿರುವುದೇ ಇಲ್ಲ ರಂಗು ಚೆಲ್ಲುತ್ತಲೇ ಮೂಡುವುದು ಬೆಳಕಿನ ಚೆಂಡು !
ಮಾವು ಸವಿಯುವಾಗ ಬೇವನುಣಿಸಿದವರ ನೆನಪು ಮೃಷ್ಟಾನ್ನವನ್ನುಣ್ಣುವಾಗ ಗಂಜಿಯೂಟದ ಮೆಲುಕು ನೀಡಬೇಕು ಮನಕೂ ತರಬೇತಿ ಬದುಕಸವಿನನುಭವಿಸಲು ಪೂರ್ತಿ
ನೀ ತಾಯಿಯಾದರೆ ನಾ ನಿನ್ನ ಶಿಶು ನೀ ಗುರುವಾದರೆ ನಾ ನಿನ್ನ ಶಿಷ್ಯೆ ನೀ ಭಗವತಿಯಾದರೆ ನಾ ನಿನ್ನ ಭಕ್ತೆ ನೀ ಸೌಂದರ್ಯವತಿಯಾದರೆ ನಾ ನಿನ್ನ ಉಪಾಸಕಿ ಪ್ರಕೃತಿಯೇ, ನೀ ಬಿಡಿಸಿಟ್ಟ ರಹಸ್ಯವಾದರೆ ನಾ ಮಡಿಸಿಟ್ಟ ಬಿಂದು !
**ಮುಂಜಾನೆ**ದಿನವಿಡೀ ನಲಿವಿನಲಿರುವೆನೆಂದುನಾ ಧೇನಿಸುತಲಿರಲುಅದಾಗಲೇ ಕಂಪಬೀರುತನಸುಬೆಳಕಲಿ ಅಂದವಾಗಿನಗುತ್ತಿತ್ತು ಉದಯ ಮಲ್ಲಿಗೆ !** ಮುಸ್ಸಂಜೆ**ಮಹತ್ವದ ಗುರಿಯನೊಂದುನಾ ಕನವರಿಸುತಿರಲುಅದಾಗಲೇ ಕಂಪಬೀರುತನಸುಗತ್ತಲಲಿ ಚಂದವಾಗಿನಗುತ್ತಿತ್ತು ಸಂ...
ಯಾರು ಹೇಳಿದರೇನುಸಂಭಾವನೆಯಿಲ್ಲದಕವಿತೆ ಗೀಚುವ ಗೀಳೆಂದು ?ಪಿಸುಗುಟ್ಟಿತು ಮನವುಸರಿಸಾಟಿಯಿಲ್ಲದಆನಂದಾನುಭೂತಿಯೇ ಮೇಲೆಂದು !
ಅಂದುಕೊಂಡಂತೆಆಗುವುದೇ ?ಬೆಸೆದಿದೆ ಸೂತ್ರವದೇನೋ ?ಬೇಕೆಂದಾಗ ಕಾಮನಬಿಲ್ಲುಮೂಡುವುದೇ?ಗುಡುಗಿಗೂ ಮಿಂಚಿಗೂ ಇದೆ ನಂಟುಬಿಚ್ಚಬೇಕು ನಮ್ಮೊಳಗಿನ ಗಂಟು
ಗೆಳೆತನದ ಬಲವಿರಲು ಅರಳುವುದು ಮನಸು ಬದುಕಿನಲಿ ಒಲವಿರಲು ಕನಸುಗಳು ಸೊಗಸು ಮನದಗಲ ನಗುವಿರಲು ಅನುದಿನವು ಚೆಲುವು ಅಳುತಿರುವ ಮನಗಳಿಗೆ ಹರಿಸುತಿರು ನಲಿವು
ಸುಡುವ ರಣಬಿಸಿಲು ಮನೆಯೊಳಗೆ ನಳ್ಳಿಯಲಿ ಸುರಿಯುತಿರುವ ನೀರು ಸೌಕರ್ಯವೊಂದು ವರ ಸುರಿಯುತಿರುವ ಜಡಿಮಳೆ ಮನೆಯೊಳಗೆ ನಳ್ಳಿಯಲಿ ತೊಟ್ಟಿಕ್ಕದ ನೀರು ಸೌಕರ್ಯದ ಅಪಸ್ವರ ಅವಲಂಬನೆಯ ಪ್ರತಿಫಲ
ನಮ್ಮಮನೆಯಂಗಳಕೆ ಪಕ್ಕದ್ಮನೆಯ ಮರದೆಲೆಗಳು ದುರಿದರೆ ಮೈಯೆಲ್ಲಾ ಉರಿ ಗಿಡದ ಹೂವ ತೇರಷ್ಟೇ ಇತ್ತ ಬಾಗಿದ್ದರೆ ಮನವು ತಂಪ ಝರಿ ! ಪಕ್ಕದವರ ಬಾಳಂಗಳದಲಿ ನಾವು...?
ಮಳೆಗಾಲದಲಿ ಎಲ್ಲೆಲ್ಲೂ ನೀರು, ತುಂಬಿ ಹಳ್ಳ ನದಿಗಳು ಕಡಲ ಸೇರಿ ಉಪ್ಪಾಗುತಿದೆ ಬೆಪ್ಪ ಮನುಜ, ತನ್ನ ಸಂಖ್ಯೆಯನ್ನಷ್ಟೇ ಹೆಚ್ಚಿಸಿ, ಇದ್ದ ಕೆರೆಬಾವಿಗಳನು ಮುಚ್ಚಿಸಿ, ಹೋರಾಡುವನು ಹನಿ ನೀರಿಗಾಗಿ ಮತ್ತೆ ಬೇಸಿಗೆಯಲಿ