ಸುಡುವ ರಣಬಿಸಿಲು

ಮನೆಯೊಳಗೆ ನಳ್ಳಿಯಲಿ

ಸುರಿಯುತಿರುವ ನೀರು

ಸೌಕರ್ಯವೊಂದು ವರ


ಸುರಿಯುತಿರುವ ಜಡಿಮಳೆ

ಮನೆಯೊಳಗೆ ನಳ್ಳಿಯಲಿ

ತೊಟ್ಟಿಕ್ಕದ ನೀರು

ಸೌಕರ್ಯದ ಅಪಸ್ವರ

ಅವಲಂಬನೆಯ ಪ್ರತಿಫಲ