ರಾಧೇ ದ್ವಾರಕೆಗೆ ಏಕೆ ಬರಲಿಲ್ಲ ?
ಕೃಷ್ಣನ ಒಡಗೂಡಿ ಏಕೆ ನಿಲಲಿಲ್ಲ ?
ಪ್ರಶ್ನಿಸಲು ರಾಧೆಯನೆ ,
ನುಡಿದಳವಳು ,
ದ್ವಾರಕೆಯಲಿ ಬ್ರ೦ದಾವನವಿಲ್ಲ ,
ಯಮುನಾ ತೀರದ ಲತೆಗಲಿಲ್ಲ ,
ತಂಪಾದ ಬೆಳದಿಂಗಳು ಹರಡಿ ನಿಂತಿಲ್ಲ ,
ಗೋಪಾ -ಗೋಪಿಯರಿಲ್ಲ , ಮೊಸರ ಕುದಿಕೆಗಳಿಲ್ಲ ,
ರಾಜ ಗಾಂಭೀರ್ಯ ಕೃಷ್ಣನಲ್ಲಿ ,
ಗೋಕುಲದ ತು೦ಟಾಟವಿಲ್ಲ. .
ರಾಜ ಸಭೆಯಲ್ಲಿ ದಿನಂಪ್ರತಿ ಕೊಳಲನೂದುತ ಕೂಡಲಾರ ,
ಸಂಜೆಯಾದೊಡೆ ಗೋಪಾ -ಬಾಲರೊಡನೆ ಕೋಲಾಟ ಆಡಲಾರ ,
ಸೀರೆ ಸೆರಗ ಹಿಡಿದು ತುಂಟ ನಗೆ ಬೀರಿ ಬೆಣ್ಣೆ ಬೇಡಲಾರ ,
ತು೦ಟತನಕಿಂತ ಕರ್ತವ್ಯ ಹಿರಿದು ,
ತುಂಟ ಕೃಷ್ಣನ ಜೊತೆಗೆ ತು೦ಟಾಟವಾಡಿದ ಮನಸು ,
ನಾ ದ್ವಾರಕೆಯಲಿದ್ದರು ನೆನೆವುದು ಬೃಂದಾವನದ ಕೃಷ್ಣನನು ,
ಅದಕೆ , ಉಳಿದಿಹೆನು ಬೃಂದಾವನದಲಿ ,
ನನ್ನ ಮನದ ಕೃಷ್ಣನ ಒಡಗೂಡಿ.
--ಗೀತಾ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)