ನನ್ನ ಪ್ರಕಾರ ರಾಧೆ ಕೃಷ್ಣನನ್ನು ಜಪಿಸಿದ್ದು ಈ ರೀತಿ......ರಾಗ ಹಾಕಿ ಭಜನೆಯ ರೂಪದಲ್ಲೂ ಇದನ್ನು ಹಾಡಬಹುದು.
ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ
ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| ಪ||
ಮನವೆಂಬ ಮಡಕೆಯಲ್ಲಿ ಮಮತೆಯೆಂಬ ಮೊಸರನಿರಿಸಿ
ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| 1||
ತನುವೆಂಬ ತಂಬಿಗೆಯಲಿ ತನ್ಮಯತೆಯ ತುಪ್ಪವಿರಿಸಿ
ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| 2||
ಬದುಕೆಂಬ ಭಾಂಡದಲ್ಲಿ ಭಕ್ತಿಯೆಂಬ ಬೆಣ್ಣೆಯಿರಿಸಿ
ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| 3||
ಹೃದಯವೆಂಬ ಹಣತೆಯಲ್ಲಿ ಹಂಬಲತೆಯ ಹಾಲನಿರಿಸಿ
ಜಪಿಸುತಿಹಳು ರಾಧೆ ಕೃಷ್ಣ ಕೃಷ್ಣ ಹರೇ ಹರೇ|| 4||
ಗೀತಾ ಪ್ರದೀಪ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!