ಮಿಂಚಂಚೆಯಲ್ಲಿ ಬಂದದ್ದು..
ಗಂಡ : ಇವತ್ತು ಊಟಕ್ಕೆ ಏನು ಮಾಡ್ತಿದ್ಯ?
ಹೆಂಡತಿ : ನಿಮಗೆ ಏನು ಬೇಕೋ ಅದೇ ಮಾಡ್ತೀನಿ
ಗ : ಅನ್ನ ಸಾಂಬಾರ್ ಮಾಡು
ಹೆ: ನೆನ್ನೆ ತಾನೇ ಮಾಡಿದ್ದೆ.
ಗ: ಚಪಾತಿ ಸಾಗು ಮಾಡು
ಹೆ: ಮಕ್ಕಳು ತಿನ್ನಲ್ಲ..
ಗ: ಪೂರಿ ಬಟಾಣಿ ಪಲ್ಯ ಮಾಡು
ಹೆ: ಅಯ್ಯೋ ನನಗೆ ಜಾಸ್ತಿ ಆಗತ್ತೆ ಅದು
ಗ: ಮೊಟ್ಟೆ ಬುರ್ಜಿ ಮಾಡು
ಹೆ: ಇಂದು ಗುರುವಾರ ಮೊಟ್ಟೆ ಮಾಡಲ್ಲ.
ಗ: ಪರೋಟ ಮಾಡು
ಹೆ: ರಾತ್ರಿ ಹೊತ್ತು ಯಾರಾದ್ರೂ ಪರೋಟ ತಿಂತಾರ?
ಗ: ಹೋಗ್ಲಿ ಹೋಟೆಲ್ ಇಂದ ಏನಾದ್ರೂ ತರೋಣ
ಹೆ: ಹೋಟೆಲ್ ತಿಂಡಿ ತಿಂದು ಯಾಕೆ ಹೊಟ್ಟೆ ಕೆಡಿಸ್ಕೋಬೇಕು
ಗ: ಬರೀ ಅನ್ನ ಮಾಡು
ಹೆ: ಅದಕ್ಕೆ ಸಾರು ಇಲ್ವಲ್ಲ..
ಗ: ಇಡ್ಲಿ ಸಾಂಬಾರ್?
ಹೆ: ಅದಕ್ಕೆ ತುಂಬಾ ಸಮಯ ಬೇಕು, ಮುಂಚೆ ಹೇಳಿದ್ರೆ ಮಾಡ್ತಿದ್ದೆ.
ಗ: ಮ್ಯಾಗಿ ಮಾಡು ಹೋಗ್ಲಿ
ಹೆ: ಅದೇನು ಹೊಟ್ಟೆ ತುಂಬತ್ತ?
ಗ: ಹೋಗ್ಲಿ ಏನೋ ಒಂದು ಮಾಡು
ಹೆ: ನೀವೇನು ತಿನ್ತೀರೋ ಹೇಳಿ ಅದೇ ಮಾಡ್ತೀನಿ.
ಪ್ರತಿಕ್ರಿಯೆ (8)