ನನ್ನ ಉಸಿರಾಟದ ಪ್ರತಿ ಉಸಿರು ನೀನು..

ನನ್ನ ಹೃದಯದ ಪ್ರತಿ ಮಿಡಿತ ನೀನು..

ನನ್ನ ಕನಸುಗಳಿಗೆ ಜೀವ ತುಂಬುವ ಪ್ರಾಣ ನೀನು...

ನನ್ನೊಳಗಿನ ಭಾವನೆಗಳಿಗೆ ಪ್ರೇರಣೆ ನೀನು..

 

ನನ್ನ ಜೀವನದ ಪರಮಾರ್ಥ ನೀನು..

ನನ್ನ ಜೀವದ ಗೆಳೆಯ ನೀನು..

ನಿರಂತರ ನನ್ನೊಡನಿರುವ ನೆರಳು ನೀನು..

ನನ್ನ ಪ್ರಾಣವು ನೀನೆ ಗೆಳೆಯ...

 

ನಿನ್ನ ನೋಡದೆ ಇರಲಾಗದು ಒಂದು ನಿಮಿಷ..

ನಿನ್ನೊಡನೆ ಮಾತಾಡದೆ ಇರಲಾಗದು ಒಂದು ಕ್ಷಣ..

ನನಗೆ ತಿಳಿಯದೆ ನಾ ನಿನಗೆ ಎಷ್ಟು ಹತ್ತಿರವಾಗಿರುವೆನಂದರೆ

ನಮ್ಮಿಬ್ಬರ ಮಧ್ಯೆ ಗಾಳಿ ಬಂದರೂ ಕೂಡ ಸಹಿಸಲಾರೆನು