ಎದುರಿಗೆ ಬಂದು ನಿಂತು ಬಿಡುತ್ತವೆ, 
ಕರೆಯದ  ಅತಿಥಿಯಂತೆ 
ಹಲ್ಲು ಕಿರಿದುಕೊಂಡು ,  ಒಮ್ಮೊಮ್ಮೆ 
ಬೇಡದ  ನೆನಪುಗಳು , ಒಳಬನ್ನಿ ಎನ್ನದೆ  ವಿಧಿ ಇಲ್ಲ...  


ತಿಳಿಹೇಳಿದ್ದೇನೆ, ನೀವು ಬರಬೇಡಿರೆಂದು
ಕೇಳುವುದೇ ಇಲ್ಲ  ಹಟಮಾರಿಗಳು 
ನನ್ನಂತೆಯೇ ನನ್ನ ನೆನಪುಗಳು
 
ನನ್ನದೇನು ದ್ವೇಷವಲ್ಲ ಅವುಗಳೊಂದಿಗೆ 
ಹಾಗಂತ ಗೆಳೆಯರೇನು  ಅಲ್ಲ  ನಾವಿಬ್ಬರೂ
ತೀರ ಬೆಳ್ಳಂಬೆಳ್ಳಿಗ್ಗೆ  ಆಫೀಸ್ ಗೆ  ಹೊರಟುನಿಂತಾಗ , 
ಬರಬೇಡಿ ಅಷ್ಟೇ....
 
ಬನ್ನಿ,  ಒಂದು ಸುಂದರ ಸಂಜೆ,
ನನ್ನೂರಲ್ಲಿ ನಾನಿದ್ದಾಗ ಅಭ್ಯಂತರವಿಲ್ಲ 
ತೀರ ಅಪರಿಚಿತರಾಗಬಾರದಲ್ಲ ನಾವು ಅದಕ್ಕೆ... 
           
- ಗಾರ್ಗಿ ಭಟ್