"ಮನುಜನಆಸೆಮರೀಚಿಕೆಯಂತೆ.ದೂರದಲ್ಲೆಲ್ಲೋಇದ್ದಂತೆಕಾಣುವುದು,ಕೈಗೆಟಕುವಂತೇಅನಿಸುವುದು, ಹತ್ತಿರಹೋದಾಗಮಾತ್ರಮರೆಯಾಗುವುದು." - ನನ್ನ ನೆಚ್ಚಿನಸಾಲುಗಳು, ಆದರೆ ನಾ ಬರೆದಿದ್ದಲ್ಲ, ಯಾರದೋ ಬ್ಲಾಗ್ ಅಲ್ಲಿ ನೋಡಿಮೆಚ್ಚಿದೆ . ನಾ ಬಯಸಿದ್ದೆಲ್ಲ ಆಗದೆಇದ್ದಾಗ ಈ ಸಾಲುಗಳನ್ನು ನೆನೆಯುತ್ತೇನೆ.ಅಷ್ಟೇಅಲ್ಲ "ಬಯಸಿದ್ದೆಲ್ಲ ಸಿಗದು ಬಾಳಲಿ ", "ಏನೇ ಬಂದರು ಏನೇ ಆದರು, ಎಂದಿಗೂನೀನುನಗುತಿರು" ಎಂದುಕೊಂಡುಮುಗುಳ್ನಗುತ್ತೀನಿ.ಬಾಳಲ್ಲಿಅಂದುಕೊಂಡಿದ್ದುಇದುವರೆಗೆಯಾವುದುನೆರವೇರಿಲ್ಲ, ಅದಕ್ಕೆಬಹುಶಃ ಅದರಅನುಭವನನಗಿಲ್ಲ. ಆದರೆಕಂಡಂಥಕನಸುನನಸಾದಾಗಎಷ್ಟುಖುಷಿಯಾಗುತ್ತದೆಎಂದುಜನವರಿ೨೬ರಂದುಅನಿಸಿತು.ನನ್ನಬಹುದಿನಗಳಆಸೆಅಂದುನೆರೆವೇರಿತು.
"ಮೈಸೂರು ಮಲ್ಲಿಗೆ" ಚಲನಚಿತ್ರಕಡೆಗೆತುಂಬಾಒಲವಿದೆ. ಟಿವಿಯಲ್ಲಿಯಾವಾಗಮೂಡಿಬಂದರುಪೂರ್ತಿನೋಡುತ್ತೀನಿ. ಅದರಸಿಡಿಸಹಖರಿದಿಸಿದ್ದೀನಿ.ಕೆ.ಎಸ್ ನರಸಿಂಹಸ್ವಾಮಿಯವರಕವನಗಳಪರಿಚಯವಿದೆ. ಅವರ ಜನ್ಮದಿನದಂದುಪ್ರಸಾರವಾಗುವ "ಮೈಸೂರು ಮಲ್ಲಿಗೆ " ಸಿನಿಮಾವನ್ನು ನಾನು ಪ್ರತಿಬಾರಿನೋಡುತ್ತೇನೆ. ಆದರೆ ಈ ಬಾರಿ ಸ್ವಲ್ಪವಿಶೇಷವಾಗಿತ್ತುಜನವರಿ೨೬. ನಾನುಜೀವನದಮೊದಲನಾಟಕವನ್ನುರಂಗಶಂಕರದಲ್ಲಿಮೈಸೂರುಮಲ್ಲಿಗೆನೋಡುವಮುಖಾಂತರಪ್ರಾರಂಭಿಸಬೇಕುಅಂದುಕೊಂಡಿದ್ದೆ.ಆದರೆಅದುಕಾರಣಗಳಿಂದನೆರವೆರಿರಲ್ಲಿಲಆದರೆಈಬಾರಿಜನವರಿ೨೬ರಂದುರಂಗಶಂಕರದಲ್ಲಿಕಲಾಗಂಗೋತ್ರಿಯಿಂದ "ಮೈಸೂರುಮಲ್ಲಿಗೆ" ನೂರನೇಪ್ರದರ್ಶನವಿತ್ತು.ಅಂತಹವಿಶೇಷಪ್ರದರ್ಶನ ಅದುವೆಕೆ.ಎಸ್ ನರಸಿಂಹಸ್ವಾಮಿಯವರಜನ್ಮದಿನದಂದುರಂಗಶಂಕರದಲ್ಲ್ಲಿಅಂದರೆತುಂಬಾವಿಶೇಷಅನಿಸಿತು. ಆಸುವರ್ಣಅವಕಾಶಕ್ಕಾಗಿಕ್ಷಣಗಣನೆಮಾಡಿದೆ. ಅದಕ್ಕಾಗಿನನ್ನಬೇರೆಲ್ಲ ಯೋಜನೆಗಳನ್ನೂಕೈಬಿಟ್ಟಿದ್ದೆ. ಬೆಂಗಳೂರಿನಟ್ರಾಫಿಕ್ಇಂದರಂಗಶಂಕರತಲಪುವುದುಸ್ವಲ್ಪತಡವಾಯಿತು, ಆದರೆಮುಂಚಿತವಾಗಿಟಿಕೆಟ್ಕಾದರಿಸಿದ್ದರಿಂದಏನುತೊಂದರೆಆಗಲಿಲ್ಲ.ಅಂದು೫-೧೦ನಿಮಿಷಸ್ವಲ್ಪತಡವಾಗಿಪ್ರದರ್ಶನಶುರುವಾಯಿತು. ಆಸಂದರ್ಭದಲ್ಲಿನನಗಂತೂ ತಾಳ್ಮೆ ಮೀರುತ್ತಿತ್ತು . ಯಾಕೆ ತಡಾವಗುತ್ತಿದ್ದೆಎಂದು ಚಡಪಡಾಯಿಸುತ್ತಿದ್ದೆ
.
"ಬಳೆಗಾರಚೆನ್ನಯ್ಯಬಾಗಿಲಿಗೆಬಂದವನೇ " ಎಂಬಹಾಡಿನಿಂದಪ್ರಾರಂಭವಾದ ಮೈಸೂರು ಮಲ್ಲಿಗೆಯಕಂಪುಅಮೋಘವಾಗಿತ್ತು.ಪ್ರತಿಯೊಂದುಹಾಡಿಗೂಮನಸ್ಸುನಲಿಯುತಿತ್ತು, ಸಾಲುಗಳು ರಾಗದೊಂದಿಗೆ ಹೊರಹೊಮ್ಮುತಿತ್ತು.ಸಮಯಹೋಗಿದ್ದೆತಿಳಿಯಲಿಲ್ಲ . ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿಯವರಚರಿತ್ರೆನಿರೂಪಿಸಿದಆಪ್ರದರ್ಶನಸೊಗಸಾಗಿ ಮೂಡಿಬಂತು. ಅವರಕವನಗಳಮೆಲಕುಬೇರೊಂದುಲೋಕಕ್ಕೆಕರೆದೊಯಿತ್ತು .೧೦೦ಪ್ರದರ್ಶನಪ್ರಯುಕ್ತಕಲಾಗಂಗೋತ್ರಿಯವರು೧೦೦ಮಲ್ಲಿಗೆಸಸಿಗಳನ್ನುಪ್ರೇಕ್ಷಕರಲ್ಲಿ ವಿತರಿಸಿದರು.ಅದೃಷ್ಟವಶಾತ್ನನಗೊಂದುಸಸಿಸಿಕ್ಕಿತು. ಮರೆಯಲಾಗದಆಸಮಯತನ್ನದೇಆದನೆನಪಿನಕಂಪನ್ನುಚಾಪಿಸಿದೆ.ಜೀವನದಲ್ಲಿಕಂಡಂಥಕನಸುಗಳಲ್ಲಿಒಂದಾದರುನನಸಾಯಿತುಎಂದುಸಂತೋಷ ಪಡುತಿದ್ದೇನೆ. ನನ್ನ ಕನಸನ್ನು ಕೈಗೊಡಿಸಲು ಸಾಥ್ ನೀಡಿದ ನನ್ನ ಗೆಳತಿಯರಾದ ಸೌಮ್ಯ ಮತ್ತು ಶ್ರುತಿಗೆ ವಂದನೆಗಳು :-)
ಪ್ರತಿಕ್ರಿಯೆ (3)