ಕೇಳುತ್ತಿಲ್ಲವೇ ನಿಮಗೆ ವೃಕ್ಷವೆಲ್ಲದರ ಅರಣ್ಯರೋದನ.
ಸರಪಳಿಯ ಜಣಜಣದಿ,
ಗರಗಸದ ಗರಗರದಿ,
ಕೇಳದಿರಬಹುದು ಕ್ಷೀಣವೇದನ.
ಸ್ವಲ್ಪ ಕಿವಿಗೊಟ್ಟು ಕೇಳಿ,
ಯಂತ್ರಗಳ ತಂದು ಲಾರಿಗೇರಿಸುವಾಗ,ಬಿಗಿದು ಕಟ್ಟಿದ ಮರಗಳ ವೃಕ್ಷಗಾಯನ.
ಯಂತ್ರಗಳ ಆರ್ಭಟದಿ ಕೇಳದಿರಬಹುದು ಕ್ಷೀಣವೇದನ