ಬಾ ಮಲೆನಾಡಿನ ಸಿರಿ ದರ್ಶನಕ್ಕೆ.
ರವಿ ಏರುವ,ಮಂಜಾರುವ,ಹೂ ಬಿರಿಯುವ ಶುಭಕಾಲಕ್ಕೆ.
ಕೋಗಿಲೆ ಇಂಚರ,ನಾಟ್ಯಮನೋಹರ-ನವಿಲಾಟದ ಸುಂದರ ನೋಟಕ್ಕೆ.

ತೆನೆ ತೂಗುವ,ತೊರೆ ಜಾರುವ,ಜುಳುನಾದದ ಸವಿರಾಗಕ್ಕೆ.

ಸಿಹಿಜೇನಿದೆ,ಸವಿಫಲವಿದೆ,ಭಾ ಸ್ವೀಕರಿಸು ಓ ಅಥಿತಿಯೇ

ಕಾಫಿಯ ಕಂಪಿದೆ,ಹೊಂಗೆಯ ತಂಪಿದೆ,ಬಾ ಬೆಟ್ಟದ ಪೇಯದಾಸ್ವದಕ್ಕೆ.