ಪ್ರೀತಿ.
ಎದೆಹಾಲನುಣಿಸಿ
ಜೀವ ಪೋಷಿಸುವ
ಬೆಚ್ಚನ್ನ ಮಡಿಲು -
ಪ್ರೀತಿ.
ವ್ಯಕ್ತಿದೌರ್ಬಲ್ಯ ವಾತಾಪಿಯ
ಜೀರ್ಣಿಸಿಕೊಳ್ಳುವ
ಅಗಸ್ತ್ಯ ಒಡಲು -
ಪ್ರೀತಿ.
ಆಳಕ್ಕಿಳಿದಂತೆ
ಮುತ್ತುರತ್ನದಾಗರವಾಗುವ
ವಿಶಾಲ ಕಡಲು -
ಪ್ರೀತಿ.
ಬದುಕ ಬವಣೆಯಲಿ
ಬಸವಳಿಯೆ ಜೀವ
ಆಸರೆಯಾಗುವ ಹೆಗಲು -
ಪ್ರೀತಿ.
ಹೀಗೆ
ಪ್ರೀತಿಗೆ ಸಾಟಿಯಾದದ್ದು
ಪ್ರೀತಿ.
ಅಷ್ಟೆ!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)