ಓ ಮರಿಹಕ್ಕಿಯೇ ಭಾಗ್ಯವೆಂದರೇ ನಿನ್ನದೇ ಬಿಡು.
ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ,
ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿನ್ನದೇ ಬಿಡು.
ದೇಶಕಾಲದ ಪರಿವೇ ಇಲ್ಲದೇ,
ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ.
ಜಾತಿ ಧರ್ಮದ ಗೊಡವೇಯೇ ಇಲ್ಲದ ಭಾಗ್ಯವೆಂದರೇ ನಿನ್ನದೇ ಬಿಡು.