ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯು
ಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿ
ಮೈದಾನಕೆ ಆಡುವ ಆಟವ ಲೋಕವ ಮರೆತು..
ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,
ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,
ಒಂದೇ ಎರಡೇ ಲೆಕ್ಕವಿಲ್ಲದಷ್ಟು ಆಟವ ಆಡೋಣ ಬನ್ನಿ..
ಸೂರ್ಯನ ಬಿಸಿಲಿಗೆ ಪೈಪೋಟಿ ಕೊಟ್ಟು ಆಡುವ ಬನ್ನಿ..
ಬಿಸಿಲ ಲೆಕ್ಕಿಸದೆ ಬೆವರ ಹರಿಸಿ ಆಡುವ ಬನ್ನಿ..
ಮೈಯೆಲ್ಲಾ ಮಣ್ಣಾಗಿಸಿ ದಣಿದು ಕುಣಿದು ಆಡುವ ಬನ್ನಿ...
ಕಂಪ್ಯೂಟರ್, ಟಿ.ವಿ. ಸಿನಿಮ ಎಲ್ಲ ಬಿಟ್ಟು ಬನ್ನಿ..
ಉಲ್ಲಾಸಕರ ಉತ್ಸಾಹಕರ ಆಟವ ಆಡಿ ಬನ್ನಿ..
ಗೆಳೆಯರೊಡನೆ ಕೂಡಿ ಸಂಭ್ರಮಿಸೋಣ ಬನ್ನಿ..
ಸೋಲು ಗೆಲುವು ಜಗಳ ಮುನಿಸು ಎಲ್ಲವು ಉಂಟು ಇಲ್ಲಿ..
ಸ್ಪರ್ಧಾತ್ಮಕ ಮನೋಭಾವ ಇಟ್ಟು ಆಡೋಣ ಬನ್ನಿ...
ಮನಸಿಗೆ ಮುದ ಕೊಡುವ ಆಟವ ಆಡೋಣ ಬನ್ನಿ...
ಆಟವ ಮುಗಿಸಿ ಶರಬತ್ತು, ಐಸ್ ಕ್ಯಾಂಡಿ ತಿನ್ನುವ ಬನ್ನಿ..
ಬೇಸಿಗೆ ರಜೆ ಮುಗಿಯುವ ಮುಂಚೆ ಎಲ್ಲ ಆಟವ ಆಡೋಣ ಬನ್ನಿ..
ರಜೆಯ ಮುಗಿಸಿ ಹೊಸ ಪುಸ್ತಕ ಹಿಡಿದು ಶಾಲೆಗೆ ಹೋಗೋಣ ಬನ್ನಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!