ನಲವತ್ತರಲ್ಲಾಯಿತು ಪರಿಚಯ
ಶುರುವಾಗೆ ಬಿಟ್ಟಿತು ಪ್ರಣಯ
ತಾಳಲಾರದೆ ಅಗಲಿಕೆಯ
ಮಾಡಿಕೊಂಡೇ ಬಿಟ್ಟೆ ಪರಿಣಯ
ಬರುವ ಮೊದಲು ಬರೀ ನಿರಾಸಕ್ತಿ
ಬಂದ ಮೇಲೆ ತುಂಬಿದಳು ಆಸಕ್ತಿ
ಜಡತನದಿಂದ ಮಾಡಿ ಮುಕ್ತಿ
ನೀಡಿಹಳು ಸ್ಪೂರ್ತಿ, ಶಕ್ತಿ.
ಇವಳಿಲ್ಲದೆ ಬರಡು ಈ ಬದುಕು
ಸದಾ ಜೊತೆಯಲ್ಲಿ ಇವಳಿರಬೇಕು
ಇವಳಿಲ್ಲದಾ ದಾರಿ ಮಸುಕು
ಇವಳೇ ಕಂಗಳ ಬೆಳಕು.
ಇವಳಿಲ್ಲದ ಈ ಜೀವನ
ಬೆಳಕಿದ್ದೂ ಕತ್ತಲೆಗೆ ಸಮಾನ
ಯಾರೆಂಬ ಕುತೂಹಲಾನ
ಇವಳೇ........ಮಹಾರಾಯತಿ ಸು-ಲೋಚನ (ಕನ್ನಡಕ)
ಇವಳು ಯಾರು ಬಲ್ಲಿರೇನು?
ಪ್ರತಿಕ್ರಿಯೆ (5)