ಒಲವಿನ ಕರೆ
ಕಡಲ ಅಂಚಿನಲಿ
ಅಡಿಗಳ ಎಳೆದಿಡುವಾಗ
ಒಡಲ ಆಳದಲಿ
ಅಳಿದ ನಡೆಗಳ ನೆನಪು.
ಕರೆಯಲಿಟ್ಟ ನಡೆ
ತಿರುಗಿ ನೋಡೆ ಸುಳಿವಿರದು.
ಮರೆಯಲಿಟ್ಟ ನೋವು
ತಿರುಗಿತಷ್ಟೇ- ಸುಳಿಬಿಡದು.
ಕಪ್ಪಿರಳೋ, ತಿಂಗಳೋ,
ಜಪ್ಪಿ ಮೇಲೇರಿ ಮೊರೆಯುವುದು.
ತಪ್ಪಿ ನೆನೆದ ನೆವ-
ದಪ್ಪಿ ಕೊರಳ ಬಿಗಿಯುವುದು.
ಹೆಜ್ಜೆಗೋಜಲಿನೊಳು ಬೆಂದು ಹುಡಿಯಾಗಿದ್ದೆನು ಅಂದು.
ನಿಜದೊಲವಿನೊಳು ಮಿಂದು ಮಡಿಯಾಗಿಹೆನು ಇಂದು.
-ಆತ್ರೇಯ.
ಪ್ರತಿಕ್ರಿಯೆ (2)